ಭಾರತದ ಸಿಇಒ (ಮುಖ್ಯ ಕಾರ್ಯನಿರ್ವಣಾಧಿಕಾರಿ)ಗಳು ಬಹಳ ಆತ್ಮವಿಶ್ವಾಸಿಗಳಂತೆ. ಜಾಗತಿಕ ಆರ್ಥಿಕ ಕುಸಿತವಿದ್ದರೂ ಅತ್ಯಧಿಕ ಆತ್ಮವಿಶ್ವಾಸ ಹೊಂದಿದವರು ಎಂದರೆ ಭಾರತೀಯ ಸಿಇಒಗಳು ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಪ್ರೈಸ್‌ವಾಟರ್‌ಹೌಸ್ ಕೂಪರ್‌ನ 12ನೇ ವಾರ್ಷಿಕ ಜಾಗತಿಕ ಸಿಇಒಗಳ ಸಮೀಕ್ಷೆಯಲ್ಲಿ ಶೇ.50ರಷ್ಟು ಭಾರತೀಯ ಸಿಇಒಗಳು ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ತೀವ್ರ ಮಟ್ಟದ್ದಲ್ಲವಾದರೂ, ಸ್ವಲ್ಪ ಪರಿಣಾಮ ಕಂಡಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಶೇ.70ರಷ್ಟು ಸಿಇಒಗಳು ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವಾಸ ವ್ಯ್ತಪಡಿಸುತ್ತಾರೆ. ಹೀಗಾಗಿ ಭಾರತೀಯ ಸಿಇಒಗಳು ಅತ್ಯಂತ ಹೆಚ್ಚು ಆತ್ಮವಿಶ್ವಾಸಿಗಳು ಎಂದು ಸಮೀಕ್ಷೆ ಸಾಬೀತುಪಡಿಸಿದೆ. ಈ ಆತ್ಮವಿಶ್ವಾಸ ಭಾರತದ ಮಾರುಕಟ್ಟೆಯ ಪಕ್ವತೆಯಿಂದಾಗಿ ಬಂದಿದೆ ಎಂಬುದು ಹಲವು ಉದ್ಯಮಿಗಳ ಅಭಿಪ್ರಾಯ.
ಉಳಿದ ರಾಷ್ಟ್ರಗಳ ಪೈಕಿ, ಉತ್ತರ ಅಮೆರಿಕಾ ಹಾಗೂ ಪಶ್ಚಿಮ ಯುರೋಪ್‌ನ ಸಿಇಒಗಳ ಪೈಕಿ ತಲಾ ಶೇ.15 ಮಂದಿ ಇನ್ನು 12 ತಿಂಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಲ್ಯಾಟಿನ್ ಅಮೆರಿಕಾದಲ್ಲಿ ಶೇ.21, ಏಷ್ಯಾ ಫೆಸಿಫಿಕ್‌ನಲ್ಲಿ ಶೇ.31, ಮಧ್ಯ ಹಾಗೂ ಪೂರ್ವ ಯುರೋಪ್‌ನಲ್ಲಿ ಶೇ.21ರಷ್ಟು ಆತ್ಮವಿಶ್ವಾಸ ವ್ಯಕ್ತವಾಗಿವೆ. |