ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಅಭಿವೃದ್ಧಿ ದರ ಶೇ.7 ರಷ್ಟು:ಸೇನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಅಭಿವೃದ್ಧಿ ದರ ಶೇ.7 ರಷ್ಟು:ಸೇನ್
ಕೇಂದ್ರ ಸರಕಾರ ಈಗಾಗಲೇ ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.7 ರ ಗಡಿಯನ್ನು ತಲುಪಲಿದೆ ಎಂದು ಯೋಜನಾ ಆಯೋಗದ ಸದಸ್ಯ ಅಭಿಜಿತ್‌ ಸೇನ್ ಹೇಳಿದ್ದಾರೆ.

ಉತ್ತೇಜನಾ ಪ್ಯಾಕೇಜ್‌ಗಳನ್ನು ಗಣನೆಗೆ ತೆಗೆದುಕೊಳ್ಳದೇ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ. 5ಕ್ಕೆ ತಲುಪಲಿದೆ ಎನ್ನುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಮೀಕ್ಷೆಗೆ ಆಧಾರವಿಲ್ಲ. ಈಗಾಗಲೇ ಕೇಂದ್ರ ಸರಕಾರ ಎರಡು ಉತ್ತೇಜನಾ ಪ್ಯಾಕೇಜ್‌ಗಳನ್ನು ಘೋಷಿಸಿದ್ದರಿಂದ ಜಿಡಿಪಿ ದರದಲ್ಲಿ ಶೇ.1.5 ರಿಂದ ಶೇ.2 ರವರೆಗೆ ಏರಿಕೆಯಾಗಿ 2009-10 ರ ಆರ್ಥಿಕ ಸಾಲಿನಲ್ಲಿ ಶೇ.6.5 ರಿಂದ ಶೇ.7ಕ್ಕೆ ತಲುಪಲಿದೆ ಎಂದು ಸೇನ್ ತಿಳಿಸಿದ್ದಾರೆ.

ನನಗೆ ವ್ಯಯಕ್ತಿಕವಾಗಿ ಹಣದುಬ್ಬರದ ಕುಸಿತ ಕಂಡುಬರುವುದಿಲ್ಲ. ಆದರೆ ಕೆಲ ಕ್ಷೇತ್ರಗಳಲ್ಲಿ ಮಾತ್ರ ಹಣದುಬ್ಬರ ಕುಸಿತ ಕಂಡುಬರುವ ಸಾಧ್ಯತೆಗಳಿವೆ ಎಂದು ಸೇನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಥಿಕ ಅಭಿವೃದ್ಧಿ ದರ, ಸೇನ್
ಮತ್ತಷ್ಟು
3ಜಿ ಸ್ಪೆಕ್ಟ್ರಂ ಹರಾಜು ವಿಳಂಬ ಸಾಧ್ಯತೆ:ಬೆಹುರಿಯಾ
ಭಾರತದ ಜಿಡಿಪಿ ದರ ಕುಸಿತ : ಐಎಂಎಫ್
ನೇರ ತೆರಿಗೆ ಸಂಗ್ರಹದಲ್ಲಿ ಶೇ.18 ರಷ್ಟು ಏರಿಕೆ
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ
ವಿಐಪಿಗಳಿಗೆ ಭದ್ರತಾ ಕಾರು 'ದಿ ಡೆವಿಲ್'
ಉದ್ಯೋಗ ಕಡಿತ ಅನಿವಾರ್ಯ: ಕುಲಕರ್ಣಿ