ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೆರಿಗೆ ಇಲಾಖೆ ಕೆಂಗಣ್ಣಿಗೆ ಗುರಿಯಾದ ಬಿಸಿಸಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆರಿಗೆ ಇಲಾಖೆ ಕೆಂಗಣ್ಣಿಗೆ ಗುರಿಯಾದ ಬಿಸಿಸಿಐ
PTI
ಸರ್ಕಾರ 91 ಕೋಟಿ ರುಪಾಯಿಗಳಷ್ಟು ತೆರಿಗೆಯನ್ನು ಐಪಿಎಲ್-1ರಿಂದ ಸಂಪಾದಿಸಿದೆ. ಆಟಗಾರರು, ಅಂಪೈರ್‌ಗಳು ಕೋಚ್‌ಗಳು ಹಾಗೂ ಕಮೆಂಟೇಟರ್‌ಗಳು ಹಾಗೂ ಇತರರಿಗೆ ನೀಡಿದ ಸಂಭಾವನೆಯ ಮೊತ್ತದ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್) ಕಡಿತದಿಂದ ಪಡೆದ ಮೊತ್ತ ಇದಾಗಿದೆ.

ಆದಾಯ ತೆರಿಗೆ ಇಲಾಖೆ ಪಡೆದ ಪ್ರಾಥಮಿಕ ಟಿಡಿಎಸ್ ಮೊತ್ತ ತೀರಾ ಕಡಿಮೆಯಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ), ಬಿಸಿಸಿಐಗೆ ನೋಟೀಸು ನೀಡಿತ್ತು. ಕಳೆದ ವರ್ಷ ನೀಡಿದ ಈ ನೋಟೀಸ್‌ನಲ್ಲಿ ಟಿಡಿಎಸ್ ಮೊತ್ತವನ್ನು ಸರಿಯಾಗಿ ಕಡಿತಗೊಳಿಸಲಾಗಿಲ್ಲ. ಕೆಲವು ಆಟಗಾರರಿಗೆ ನೀಡಿದ ಸಂಭಾವನೆಯಿಂದ ಕೇವಲ ಶೇ.2ರಷ್ಟು ಮಾತ್ರ ಟಿಡಿಎಸ್ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿತ್ತು.

ಮೂಲಗಳ ಪ್ರಕಾರ ಆದಾಯ ತೆರಿಗೆ ಇಲಾಖೆ ಸುಮಾರು 65 ಕೋಟಿ ರುಪಾಯಿಗಳಷ್ಟಚು ಮೊತ್ತವನ್ನು ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಪಡೆದಿತ್ತು. ಇದು ಒಟ್ಟು 670 ಕೋಟಿ ರುಪಾಯಿಗಳಷ್ಟು ಐಪಿಎಲ್ ಸಂದರ್ಭ ನೀಡಿದ ಸಂಭಾವನೆಯಲ್ಲಿ ಬಂದ ಟಿಡಿಎಸ್ ಆಗಿತ್ತು.

ಆಗಸ್ಟ್ ತಿಂಗಳಲ್ಲಿ ಸಿಬಿಡಿಟಿ ನೀಡಿದ ನೋಟೀಸ್‌ನಲ್ಲಿ ಆಟಗಾರರು (ಭಾರತೀಯರು ಹಾಗೂ ವಿದೇಶೀಯರು), ಕೋಚ್‌ಗಳು, ತರಬೇತುದಾರರು, ಅಂಪೈರ್‌ಗಳು, ರೆಫರಿಗಳು, ಟೀಮ್ ಫಿಸಿಶಿಯನ್‌ಗಳು, ಫಿಸಿಯೋಥೆರಪಿಸ್ಟ್‌ಗಳು, ಇವೆಂಟ್ ಮ್ಯಾನೇಜರ್‌ಗಳು, ಕಮೆಂಟೇಟರ್‌ಗಳು, ಆಂಖರ್‌ಗಳು ಹಾಗೂ ಅಂಕಣಕಾರರಿಗೆ ನೀಡಿದ ಸಂಭಾವನೆಯಲ್ಲಿ ಶೇ.10ರಷ್ಟು ಟಿಡಿಎಸ್ ಕಡಿತಗೊಳಿಸಬೇಕು ಎಂದು ವಿವರಿಸಿತ್ತು. ಆದರೂ ಕೆಲವು ಆಟಗಾರರಿಗೆ ಶೇ.2ರಷ್ಟು ಮಾತ್ರ ಟಿಡಿಎಸ್ ಕಡಿತಗೊಳಿಸಿದ್ದು ಈಗ ಸಿಬಿಡಿಟಿಯ ಕೆಂಗಣ್ಣಿಗೆ ಬಿಸಿಸಿಐ ಗುರಿಯಾಗಿದೆ.

ಇದಲ್ಲದೆ, ಸೇವಾ ತೆರಿಗೆ ವಿಷಯದಲ್ಲೂ ಬಿಸಿಸಿಐಗೆ ಪೆಟ್ಟು ಬಿದ್ದಿದೆ. ಸೇವಾ ತೆರಿಗೆ ಆಯೋಗ ಪ್ರಾಯೋಜಕತ್ವದ ಮೊತ್ತದಲ್ಲಿ ಸೇವಾ ತೆರಿಗೆಯನ್ನು ಪಾವತಿಸಲು ಐಪಿಎಲ್ ಸಂಘಟಿಸಿದವರಿಗೆ ಸೂಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಮರ್ಸಿಡಿಸ್ ಬೆಂಜ್ ಕಾರು ಮಾರುಕಟ್ಟೆಗೆ
ಬೆಂಗಳೂರು ವಿಶ್ವ ದರ್ಜೆಯ ರೈಲ್ವೆ ನಿಲ್ದಾಣ
ಇಂಟರ್ನೆಟ್ ಎಕ್ಸ್‌ಪ್ಲೋರರ್-8 ಡೌನ್‌ಲೋಡ್‌ಗೆ ಲಭ್ಯ
ಹಣದುಬ್ಬರ ಕುಸಿತ ಕಳವಳಕಾರಿ:ಚೇಂಬರ್
ಭಾರತದ ಜವಳಿ ರಫ್ತು ಉದ್ಯಮ ನೀರಸ:ಸಿಂಗ್