ಜಗತ್ತಿನ ಬಲಾಢ್ಯ ಆರ್ಥಿಕ ರಾಷ್ಟ್ರವಾದ ಅಮೆರಿಕ, ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆ ಬಿಕ್ಕಟ್ಟನ್ನು ಪರಿಹರಿಸಲು 1 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ತೈಲ ದರ ಪ್ರತಿ ಬ್ಯಾರೆಲ್‌ಗೆ 50 ಡಾಲರ್‌ಗಳಿಗೆ ಏರಿಕೆಯಾಗಿದೆ.ನ್ಯೂಯಾರ್ಕ್ ಶೇರುಪೇಟೆಯ ಏಪ್ರಿಲ್ ತಿಂಗಳ ಸಾದಾ ಕಚ್ಚಾ ತೈಲ ಸರಬರಾಜು ದರ ಪ್ರತಿ ಬ್ಯಾರೆಲ್‌ಗೆ 3.47 ಡಾಲರ್ ಏರಿಕೆಯಾಗಿ 51.61 ಡಾಲರ್‌ಗಳಿಗೆ ತಲುಪಿದೆ.ಕಳೆದ ನಾಲ್ಕು ತಿಂಗಳುಗಳಲ್ಲಿ ಪ್ರಥಮ ಬಾರಿಗೆ ಪ್ರತಿ ಬ್ಯಾರೆಲ್ ದರ 50 ಡಾಲರ್‌ಗೆ ತಲುಪಿದೆ.ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆರ್ಥಿಕ ವ್ಯವಸ್ಥೆ ಬಲಪಡಿಸಲು 1.15 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರಿಂದ ತೈಲ ದರಗಳಲ್ಲಿ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲ ವಾರಗಳಿಂದ ನಿರಂತರ ಕುಸಿತ ಕಂಡಿದ್ದ ಕಚ್ಚಾ ತೈಲ ದರ ಅಮೆರಿಕದ ಆರ್ಥಿಕ ಸ್ಥಿತಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಪೂರೈಕೆ ರಾಷ್ಟ್ರಗಳು ದರ ಹೆಚ್ಚಳವನ್ನು ನಿರೀಕ್ಷಿಸುತ್ತಿವೆ ಎಂದು ಬಾರ್ಕಲೆ ಕ್ಯಾಪಿಟಲ್ ಕಾನಸ್ಟಾಂಝಾ ಜಕಾಝಿಯೊ ಹೇಳಿದ್ದಾರೆ. |