ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಮತ್ತಷ್ಟು ಕುಸಿತವಿಲ್ಲ:ಮೊಂಟೆಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಮತ್ತಷ್ಟು ಕುಸಿತವಿಲ್ಲ:ಮೊಂಟೆಕ್
PTI
ಕಳೆದ ಮೂರು ದಶಕಗಳಿಗಿಂತ ಇಳಿಕೆ ಕಂಡ ಹಣದುಬ್ಬರ ಶೇ.0.44ಕ್ಕೆ ತಲುಪಿದ್ದು, ಆರ್ಥಿಕತೆ ಕುಸಿತದತ್ತ ಸಾಗುತ್ತಿದೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

ಹಣದುಬ್ಬರ ಇಳಿಕೆ ದೇಶದ ಆರ್ಥಿಕ ವ್ಯವಸ್ಥೆಗೆ ಆರೋಗ್ಯಕರವಾಗಿದೆ. ದರ ಇಳಿಕೆಯಿಂದಾಗಿ ಹಣದುಬ್ಬರ ಕುಸಿತವಾಗಿದೆ. ಸರಕಾರಕ್ಕೆ ಹಣದುಬ್ಬರ ಇಳಿಕೆಯಾಗಲಿದೆ ಎನ್ನುವ ನಿರೀಕ್ಷೆಯಿತ್ತು. ಹಣದುಬ್ಬರದ ಮತ್ತಷ್ಟು ಕುಸಿತವನ್ನು ತಡೆಯಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಹಣದುಬ್ಬರ ಸ್ಥಿರತೆ ಕಂಡುಕೊಳ್ಳುವವರೆಗೆ ತಾತ್ಕಾಲಿಕವಾಗಿ ಮತ್ತಷ್ಟು ಕುಸಿಯಬಹುದು. ಆದರೆ ಕೇವಲ ಒಂದು ವಾರದ ಅವಧಿಗೆ ಶೂನ್ಯಕ್ಕಿಂತ ಕೆಳಗಿಳಿದಲ್ಲಿ ಹಣದುಬ್ಬರ ಕುಸಿತವೆಂದು ಹೇಳಲಾಗದು ಎಂದು ನುಡಿದರು.

ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಮಾತನಾಡಿದ ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್, ದೇಶದಲ್ಲಿ ಎದುರಾಗುತ್ತಿರುವ ಆರ್ಥಿಕ ಬಿಕ್ಕಟ್ಟು ಕುರಿತಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಗಮನಿಸುತ್ತಿದ್ದು, ಆರ್‌ಬಿಐ ಮತ್ತು ಬ್ಯಾಂಕ್‌ಗಳು ಬಡ್ಡಿ ದರವನ್ನು ಮತ್ತಷ್ಟು ಕಡಿತಗೊಳಿಸುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, ಮೊಂಟೆಕ್, ಕುಸಿತ
ಮತ್ತಷ್ಟು
ತೈಲ : ಪ್ರತಿ ಬ್ಯಾರೆಲ್‌ಗೆ 50 ಡಾಲರ್
ಗೃಹಸಾಲ ಪಾವತಿ ಕಷ್ಟವಾದರೂ ಬ್ಯಾಂಕ್ ನಿಮ್ಮೊಂದಿಗಿದೆ!
ಹಣದುಬ್ಬರ ಇಳಿಕೆಯ ಮಧ್ಯೆಯು ಅಹಾರ ದರ ಹೆಚ್ಚಳ
ತೆರಿಗೆ ಇಲಾಖೆ ಕೆಂಗಣ್ಣಿಗೆ ಗುರಿಯಾದ ಬಿಸಿಸಿಐ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಮರ್ಸಿಡಿಸ್ ಬೆಂಜ್ ಕಾರು ಮಾರುಕಟ್ಟೆಗೆ