ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ಸ್‌ನ ಶೇ.51 ರಷ್ಟು ಶೇರುಗಳ ಖರೀದಿಗೆ ಸಲ್ಲಿಸಿದ ಬಿಡ್‌ದಾರರ ಆಯ್ಕೆಯನ್ನು ಅಂತಿಮಗೊಳಿಸಲು ಹಾಗೂ ಇತರ ಸಮಸ್ಯೆಗಳ ಕುರಿತಂತೆ ಚರ್ಚಿಸುವ ನಿಟ್ಟಿನಲ್ಲಿ ಸತ್ಯಂ ಅಡಳಿತ ಮಂಡಳಿ ಸಭೆ ಇಂದು ನಡೆಯಲಿದೆ. ಸತ್ಯಂ ಕಂಪ್ಯೂಟರ್ಸ್ ಖರೀದಿಗೆ, ಲಾರ್ಸನ್ ಆಂಡ್ ಟೌಬ್ರೋ, ಬಿ.ಕೆ.ಮೋದಿ ನೇತೃತ್ವದ ಸ್ಪೈಸ್ ಗ್ರೂಪ್, ಸಾಫ್ಟ್‌ವೇರ್ ಕಂಪೆನಿ ಮಹೇಂದ್ರಾ ಟೆಕ್ ಮತ್ತು ಐಗೇಟ್ ಕಂಪೆನಿಗಳು ಸರಕಾರದಿಂದ ನೇಮಕಗೊಂಡ ಸತ್ಯಂ ಅಡಳಿತ ಮಂಡಳಿಯ ನಿರ್ದೇಶಕರಿಗೆ ಬಿಡ್‌ಗಳನ್ನು ಸಲ್ಲಿಸಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.ಬಿಡ್‌ನಲ್ಲಿ ವಿಜಯ ಸಾಧಿಸಿದ ಕಂಪೆನಿ ಸತ್ಯಂ ಕಂಪ್ಯೂಟರ್ಸ್‌ನ ಶೇ.31 ರಷ್ಟು ಶೇರುಗಳನ್ನು ಪಡೆಯಲಿದ್ದು, ನಂತರ ಮುಕ್ತ ಮಾರುಕಟ್ಟೆಯಲ್ಲಿ ಶೇ.20 ರಷ್ಟು ಶೇರುಗಳನ್ನು ಖರೀದಿಸಬಹುದಾಗಿದೆ ಎಂದು ಸತ್ಯಂ ಅಡಳಿತ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. |