ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್‌ನ ಶೇ.51 ರಷ್ಟು ಶೇರುಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಕುರಿತಂತೆ ಪತ್ರವನ್ನು ಇಂದು ಸಂಜೆಯ ವೇಳೆಗೆ ಸತ್ಯಂ ಅಡಳಿತ ಮಂಡಳಿಗೆ ಸಲ್ಲಿಸಲಾಗುವುದು ಎಂದು ಇಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಎಲ್ ಆಂಡ್ ಟಿ ವಕ್ತಾರರು ತಿಳಿಸಿದ್ದಾರೆ.ಸತ್ಯಂ ಖರೀದಿಗೆ ಬಿಡ್ ಸಲ್ಲಿಸಿದ ಕಂಪೆನಿಗಳಲ್ಲಿ ಹೆಚ್ಚಿನ ಶೇರುಗಳನ್ನು ಎಲ್ ಆಂಡ್ ಟಿ ಹೊಂದಿದೆ.ಸತ್ಯಂ ಅಡಳಿತ ಮಂಡಳಿ ಹಾಗೂ ಹೂಡಿಕೆ ಸಲಹೆಗಾರ ಕಂಪೆನಿಗಳಾದ ಗೋಲ್ಡ್‌ಮ್ಯಾನ್ ಸಾಚೆಸ್ ಮತ್ತು ಅವೆಂಡಸ್ ಕಂಪೆನಿಯ ಅಧಿಕಾರಿಗಳು ಬಿಡ್‌ಗಳನ್ನು ಪರಿಶೀಲಿಸುತ್ತಿದ್ದು, ನಾಳೆಯವರೆಗೆ ಅಂತ್ಯವಾಗುವ ಸಾಧ್ಯತೆಗಳಿವೆ. ಮುಂಬರುವ ಏಪ್ರಿಲ್ 30 ರವರೆಗೆ ಮಾರಾಟ ಪ್ರಕ್ರಿಯೆ ಅಂತ್ಯಗೊಳ್ಳಬೇಕಾಗಿದೆ ಎಂದು ವಕ್ತಾರರು ಹೇಳಿದ್ದಾರೆ.ಸತ್ಯಂ ಕಂಪ್ಯೂಟರ್ ಸರ್ವಿಸಸ್ ಸಂಸ್ಥೆಯ ಖರೀದಿಗಾಗಿ ಕಂಪೆನಿಗಳು ಅರ್ಜಿಯನ್ನು ಸಲ್ಲಿಸಿದ್ದು, ಇಒಐ ಪತ್ರವನ್ನು ಇಂದು ಸಲ್ಲಿಸುವ ಸಾಧ್ಯತೆಗಳಿದ್ದು, ಇಒಐ ಪತ್ರ ಸಲ್ಲಿಸುವ ಸಂದರ್ಭದಲ್ಲಿ 1500 ಕೋಟಿ ರೂ.ನಗದು ಹಣ ಖಾತೆಯಲ್ಲಿರುವ ಬಗ್ಗೆ ಸಾಕ್ಷಿ ಪತ್ರವನ್ನು ನೀಡಬೇಕಾಗಿದೆ ಎಂದು ವಿವಿರಣೆ ನೀಡಿದ್ದಾರೆ.ಸತ್ಯಂ ಖರೀದಿಗಾಗಿ ಭಾರತೀಯ ಕಂಪೆನಿಗಳಾದ ಲಾರ್ಸನ್ ಆಂಡ್ ಟೌಬ್ರೋ ಮತ್ತು ಬಿ.ಕೆ.ಮೋದಿ ನೇತೃತ್ವದ ಸ್ಪೈಸ್ ಗ್ರೂಪ್ ಕಂಪೆನಿಗಳು ಇಒಐ ಜೊತೆಯಲ್ಲಿ ಸಲ್ಲಿಸಬೇಕಾದ 1500 ಕೋಟಿ ರೂ.ಗಳ ನಗದು ಮೊತ್ತವನ್ನು ಹೊಂದಿವೆ ಎಂದು ಸತ್ಯಂ ಮೂಲಗಳು ತಿಳಿಸಿವೆ.ಟೆಕ್ ಮಹೇಂದ್ರಾ, ಎಲ್ ಆಂಡ್ ಟಿ, ಸ್ಪೈಸ್ ಮತ್ತು ಐಗೇಟ್, ಐಬಿಎಂ ಕಂಪೆನಿಗಳು ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಸಂಸ್ಥೆಯನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿವೆ. |