ಕಾರು ಖರೀದಿಸಲು ಸಾಲ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್, ಎರಡು ಕಂತುಗಳನ್ನು ಪಾವತಿಸಲು ವಿಫಲವಾದ ಗ್ರಾಹಕನ ಕಾರನ್ನು ಒತ್ತಾಯದ ಮೇರೆಗೆ ವಶಕ್ಕೆ ತೆಗೆದುಕೊಂಡಿದ್ದರಿಂದ ಬ್ಯಾಂಕ್‌ಗೆ ದೆಹಲಿ ಗ್ರಾಹಕ ಆಯೋಗ 35 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.ದೇಶದ ಯಾವುದೇ ಬ್ಯಾಂಕ್ ಒತ್ತಡದ ನಡತೆ ತೋರಿದಲ್ಲಿ ಮಾನಸಿಕ, ಕಿರುಕುಳ, ಅವಮಾನವೀಯ ವರ್ತನೆ ತೋರಿದಲ್ಲಿ ಗ್ರಾಹಕ ಬ್ಯಾಂಕ್‌ನಿಂದ ಪರಿಹಾರ ಪಡೆಯಲು ಯೋಗ್ಯನಾಗಿರುತ್ತಾನೆ ಎಂದು ಗ್ರಾಹಕ ಆಯೋಗದ ನ್ಯಾಯಮೂರ್ತಿ ಜೆ.ಡಿ.ಕಪೂರ್ ಹೇಳಿದ್ದಾರೆ.ಗ್ರಾಹಕನು ಪಾವತಿಸದಿರುವ ಕಂತುಗಳಿಗೆ ಮಾತ್ರ ಬ್ಯಾಂಕ್ ಶುಲ್ಕ ವಿಧಿಸಬಹುದಾಗಿದೆ. ಬಂಡವಾಳ ಹೂಡಿಕೆಯಲ್ಲಿ ಠೇವಣಿ ಹಣವನ್ನು ಗ್ರಾಹಕನಿಗೆ ಬ್ಯಾಂಕ್ ಮರಳಿಸಬೇಕಾಗುತ್ತದೆ ಎಂದು ಆಯೋಗ ಬ್ಯಾಂಕ್ ಮನವಿಯನ್ನು ತಳ್ಳಿಹಾಕಿತು.ಜಿಲ್ಲಾ ಗ್ರಾಹಕ ನ್ಯಾಯಾಲಯ, ಕಾರಿನ ನಿವ್ವಳ ಸಾಲದ ಮೊತ್ತವನ್ನು ಕಡಿಮೆ ಮಾಡಿ ಪಾವತಿಸದಿರುವ ಕಂತುಗಳೊಂದಿಗೆ ಗ್ರಾಹಕನಿಗೆ 35 ಸಾವಿರ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನೀಡಬೇಕು ಎನ್ನುವ ಆದೇಶದ ವಿರುದ್ಧ ಗ್ರಾಹಕ ಆಯೋಗಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್ ಮೇಲ್ಮನವಿ ಸಲ್ಲಿಸಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕನಿಗೆ ಕಾರು ಖರೀದಿಸಲು 4.56 ಲಕ್ಷ ರೂಪಾಯಿಗಳ ಸಾಲವನ್ನು ಮಂಜೂರು ಮಾಡಿದಾಗ ಜನೆವರಿ 2006ರಲ್ಲಿ ಗ್ರಾಹಕನು ಕಾರನ್ನು ಖರೀದಿಸಿದ್ದನು. ಎರಡು ಕಂತುಗಳನ್ನು ಪಾವತಿಸಲು ಗ್ರಾಹಕನು ವಿಫಲವಾದ ಹಿನ್ನೆಲೆಯಲ್ಲಿ ಜುಲೈ 2006 ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಒತ್ತಾಯಪೂರ್ವಕವಾಗಿ ಗ್ರಾಹಕನಿಂದ ಕಾರನ್ನು ವಶಪಡಿಸಿಕೊಂಡಿತ್ತು. ಆದರೆ ಪೊಲೀಸ್ ಅಧಿಕಾರಿಗಳ ಅನುಮತಿಯನ್ನು ಪಡೆದ ನಂತರ ಶಾಂತಿಯುತವಾಗಿ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಹೇಳಿಕೆ ನೀಡಿದೆ. |