ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬೇಸಗೆ ರಜೆಯಲ್ಲಿ ವಿದೇಶ ಪ್ರಯಾಣ ಭಾರೀ ಅಗ್ಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇಸಗೆ ರಜೆಯಲ್ಲಿ ವಿದೇಶ ಪ್ರಯಾಣ ಭಾರೀ ಅಗ್ಗ
PTI
ಮುಂಬೈ: ಬೇಸಗೆ ರಜಾದಿನಗಳು ಹತ್ತಿರ ಬರುತ್ತಿವೆ. ಸುಲಭ ದರದಲ್ಲಿ ವಿದೇಶ ಪ್ರಯಾಣ ಮಾಡಬೇಕಿದ್ದರೆ ಈಗ ಸಕಾಲ. ನ್ಯೂಯಾರ್ಕ್, ದುಬೈ, ಲಂಡನ್, ಬ್ಯಾಂಕಾಕ್‌ಗಳಿಗೆ ವಿಮಾನ ದರ ಈಗ ಭಾರೀ ಅಗ್ಗ!

ಇಂಧನದ ಬೆಲೆ ಇಳಿಕೆ, ಹಾಗೂ ಪ್ರಯಾಣ ಕಡಿಮೆಯಾಗಿರುವುದರಿಂದ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ಗಳು ಸುಲಭ ಹಾಗೂ ಅಗ್ಗದ ವಿಮಾನದ ದರಗಳ ಮೂಲಕ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ನ್ಯೂಯಾರ್ಕ್‌ಗೆ ಹೋಗಿ ಬರುವ ಒಟ್ಟು ಪ್ರಯಾಣದರ ಕೇವಲ 39 ಸಾವಿರ ರೂಪಾಯಿಗಳು ಮಾತ್ರ. ಅದೂ ತೆರಿಗೆಗಳೂ ಸೇರಿ. ಹೆಚ್ಚು ಸಮಯ ಇದ್ದು ಬರಲು ಈ ದರ ಸೂಕ್ತವಾಗಿದ್ದು, ಅಬುದಾಭಿಗೆ ಹೋಗಿ ಸ್ವಲ್ಪ ಸಮಯ ಇದ್ದು ಬರುವ ಯೋಚನೆಯಿದ್ದರೆ, ಎಟಿಹ್ಯಾಡ್ ಏರ್‌ವೇಸ್ ಮಾರ್ಚ್ 29ರಿಂದ ಜೂನ್‌ವರೆಗೆ ವಿಶೇಷ ಸೌಲಭ್ಯ ಕಲ್ಪಿಸಿದೆ. ಆ ಸಮಯದೊಳಗೆ ಟಿಕೆಟ್ ಬುಕ್ ಮಾಡಿದರೆ ಆರು ತಿಂಗಳ ಕಾಲ ಇದ್ದು ಬರಬಹುದು.

ಹೆಚ್ಚು ಕಾಲ ಇದ್ದು ಬರುವ ಯೋಚನೆಯಿಲ್ಲದಿದ್ದರೆ, ಏರ್ ಇಂಡಿಯಾ ಹಾಗೂ ಕಾಂಟಿನೆಂಟಲ್ ಏರ್‌ಲೈನ್ಸ್‌ಗಳು ಜಂಟಿಯಾಗಿ ಮುಂಬೈ- ನ್ಯೂಯಾರ್ಕ್‌ಗೆ ನೇರ ವಿಮಾನ ಸೌಕರ್ಯವನ್ನು43,800 ರೂಪಾಯಿಗಳಿಗೆ ಒದಗಿಸುತ್ತವೆ. ಇದು ಮಾರ್ಚ್ 31ರಿಂದ ಏ.5ರವರೆಗೆ ಬುಕ್ ಮಾಡುವವರಿಗೆ ಮಾತ್ರ ಲಭ್ಯ. ಕಳೆದ ವರ್ಷ ಇದು 55 ಸಾವಿರ ರೂಪಾಯಿಗಳಾಗಿತ್ತು.

ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರಯಾಣ ಇನ್ನೂ ಅಗ್ಗವಾಗಿದೆ. ಥಾಯ್ ಏರ್‌ವೇಸ್‌ನಲ್ಲಿ ಮುಂಬೈ- ಬ್ಯಾಂಕಾಕ್- ಮುಂಬೈ ಟಿಕೆಟ್ ದರ 12,800. ಇದೇ ಪ್ರಯಾಣಕ್ಕೆ ಜೆಟ್ ಏರ್‌ವೇಸ್‌ನಲ್ಲಿ 14,000 ಹಾಗೂ ಏರ್ ಇಂಡಿಯಾದಲ್ಲಿ 12,200. ದುಬೈ ಪ್ರಯಾಣಕ್ಕೂ ಈಗ ಕಡಿಮೆ ವೆಚ್ಚವೇ. ಇದರಿಂದ ಪಶ್ಚಿಮ ರಾಷ್ಟ್ರಗಳಿಗೆ ಶಾಪಿಂಗ್‌ಗಾಗಿಯೇ ಈಗ ವೀಕೆಂಡ್‌ನಲ್ಲಿ ಹೋಗಿಬರಲು ಎಮಿರೈಟ್ಸ್‌ನಲ್ಲಿ 16,500 ರೂಪಾಯಿಗಳು, ಏರ್ ಇಂಡಿಯಾದಲ್ಲಿ 10,500 ರುಪಾಯಿಗಳು.

ಲಂಡನ್ ಕೂಡಾ ಈ ಸಮಯದಲ್ಲಿ ಪ್ರಯಾಣ ವೆಚ್ಚದ ದೃಷ್ಟಿಯಲ್ಲಿ ಆಕರ್ಷಕ ತಾಣ. ಏರ್ ಇಂಡಿಯಾದಲ್ಲಿ ಲಂಡನ್‌ಗೆ ಹೋಗಿ ಬರಲು 26,500 ರೂಪಾಯಿಗಳಾದರೆ, ಬ್ರಿಟೀಶ್ ಏರ್‌ವೇಸ್‌ನಲ್ಲಿ 30,000 ರೂಪಾಯಿಗಳು. ಅಬುಧಾಬಿಯಲ್ಲಿ ಮೂರು ಗಂಟೆ ಕಾಲ ಇದ್ದರೆ ಸಾಕು ಎಂಬ ಯೋಚನೆ ನಿಮಗಿದ್ದರೆ, ಲಂಡನ್‌ಗೆ ಹೋಗುವುದು ಉತ್ತಮ. ಯಾಕೆಂದರೆ, ಎಟಿಹ್ಯಾಡ್ ‌ಏರ್‌ವೇಸ್‌ನಲ್ಲಿ 21,900 ರೂಪಾಯಿಗಳಲ್ಲಿ ಲಂಡನ್, ಅಭುದಾಬಿ ಎರಡೂ ಸುತ್ತಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನದ ಬೆಲೆ ಏರಿಕೆ
ವೆಬ್ ಮಾನಿಟರಿಂಗ್ ಸಿಸ್ಟಮ್ ದೇಶಕ್ಕೆ ವಿಸ್ತರಣೆ
ಗ್ರಾಹಕನಿಂದ ಕಾರು ವಶ:ಎಚ್‌ಡಿಎಫ್‌ಸಿಗೆ ದಂಡ
12.5 ಮಿಲಿಯನ್ ಟನ್ ಕಲ್ಲಿದ್ದಲು ಅಮುದು: ಎನ್‌ಟಿಪಿಸಿ
ಮೂಲಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿ ದರ:ಪಾರೀಖ್
ಸತ್ಯಂಗೆ ಎಲ್‌ಆಂಡ್‌ಟಿಯಿಂದ ಇಒಐ ಸಲ್ಲಿಕೆ?