ಪ್ರತಿಯೊಬ್ಬರೂ ಇ-ಮೇಲ್ ಕಳುಹಿಸುತ್ತಾರೆ. ಇ-ಮೇಲ್ ರವಾನಿಸಿದ ನಂತರ ಮಾಡಿದ ತಪ್ಪಿನ ಅರಿವಾಗುತ್ತದೆ. ಅದನ್ನು ಮರಳಿ ಪಡೆಯುವುದು ಹೇಗೆ ಎಂದು ಚಿಂತಿತರಾಗಿದ್ದೀರಾ? ಇಲ್ಲಿದೆ ನಿಮಗೆ ಶುಭಸುದ್ದಿ. ಅಂತಹ ಅವಕಾಶವನ್ನು ಜೀ ಮೇಲ್ ಒದಗಿಸುತ್ತಿದೆ. ಗೂಗಲ್‌ನ ಜಿಮೇಲ್ ಬಳಕೆದಾರರಿಗೆ ಇಂತಹ ಅವಕಾಶವನ್ನು ಒದಗಿಸಲು ಹೊಸತೊಂದು ಅವಕಾಶ ನೀಡಿದೆ.
ಗೂಗಲ್‌ನ ಜಿ ಮೇಲ್ ಪ್ರೋಗ್ರಾಂನಲ್ಲಿ "ಅನ್‌ಡು ಸೆಂಡ್" (ಕಳುಹಿಸಿದ್ದನ್ನು ರದ್ದುಪಡಿಸು) ಎನ್ನುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ನೀವು ಇ-ಮೇಲ್ ಕಳುಹಿಸಿದ ಐದು ಸೆಕೆಂಡ್ ಒಳಗೆ ಈ ಬಟನ್ ಅದುಮಿದರೆ, ಆ ಇ-ಮೇಲ್ ಸಂದೇಶವು ತಡೆ ಹಿಡಿಯಲ್ಪಡುತ್ತದೆ.
ಇ-ಮೇಲ್ ಸಂದೇಶ ರವಾನೆಯಾದ ತಕ್ಷಣ ಸ್ಕ್ರೀನ್‌ನಲ್ಲಿ 'ಸಂದೇಶ ಕಳುಹಿಸಿದೆ' ಎಂಬ ಸಂದೇಶ ಬರುತ್ತದಲ್ಲ, ಅದರ ಪಕ್ಕದಲ್ಲೇ ಇರುತ್ತದೆ ಈ "ಕಳುಹಿಸಿದ್ದನ್ನು ರದ್ದುಪಡಿಸು" ಲಿಂಕ್. ನಿಮಗೆ ಇ-ಮೇಲ್ ಸಂದೇಶ ಮರಳಿಪಡೆಯಬೇಕಾದಲ್ಲಿ ಅದನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಸಂದೇಶವು ನಿಮಗೆ ಡ್ರಾಫ್ಟ್‌ನಲ್ಲಿ ಉಳಿಯುತ್ತದೆ. |