ಜಾಗತಿಕ ಆರ್ಥಿಕ ಕುಸಿತಕ್ಕೆ ಈ ವರ್ಷದಲ್ಲಿ ಈವರೆಗೆ ಅಮೆರಿಕದ 20 ಬ್ಯಾಂಕ್‌ಗಳು ಬಲಿಪಶುವಾಗಿವೆ. ಈ ವರ್ಷದ ಕೇವಲ ಎರಡೇ ತಿಂಗಳಲ್ಲಿ 16 ಬ್ಯಾಂಕ್‌ಗಳು ಮುಚ್ಚಿದ್ದು, ಇದು ಕಳೆದ ಇಡೀ ವರ್ಷದ ಒಟ್ಟು ಮುಚ್ಚಿದ ಬ್ಯಾಂಕ್‌ಗಳ ಅರ್ಧದಷ್ಟು! ಕಳೆದ ವರ್ಷ 25 ಅಮೆರಿಕನ್ ಬ್ಯಾಂಕ್‍ಗಳು ಬೀಗ ಜಡಿದಿದ್ದವು.
ದಿ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಷನ್‌ನ ದಾಖಲೆಗಳ ಪ್ರಕಾರ, ಟೀಮ್‌ಬ್ಯಾಂಕ್, ಕೊಲೊರೇಡೋ ನ್ಯಾಷನಲ್ ಬ್ಯಾಂಕ್, ಫಸ್ಟ್‌ಸಿಟಿ ಬ್ಯಾಂಕ್‌ಗಳು ಮಾರ್ಚ್ 20ರಂದು ಮುಚ್ಚಿವೆ. ಮಾರ್ಚ್ ಆರರಂದೇ, ಫ್ರೀಡಂ ಬ್ಯಾಂಕ್ ಆಫ್ ಜಾರ್ಜಿಯಾ ಮುಳುಗಿತ್ತು.
2000ರಿಂದ ನಂತರ ಈವರೆಗೆ ಅಮೆರಿಕದಲ್ಲಿ 72 ಬ್ಯಾಂಕ್‌ಗಳು ಮುಚ್ಚಿವೆ. ಆದರೆ ಈ ಸಂಖ್ಯೆಯಲ್ಲಿ ಬಹುತೇಕ ಬ್ಯಾಂಕ್‌ಗಳು ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಬಂದೊದಗಿದ್ದು ಕಳೆದ ವರ್ಷ. ಜಾಗತಿಕ ಆರ್ಥಿಕ ಕುಸಿತದ ಪರಿಣಾಮವೇ ಇದಾಗಿದೆ. |