ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತಕ್ಕೆ ನಾಲ್ಕು ಲಕ್ಷ ಹಸುಳೆಗಳ ಸಾವು: ವಿಶ್ವಬ್ಯಾಂಕ್ ಭವಿಷ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತಕ್ಕೆ ನಾಲ್ಕು ಲಕ್ಷ ಹಸುಳೆಗಳ ಸಾವು: ವಿಶ್ವಬ್ಯಾಂಕ್ ಭವಿಷ್ಯ
PTI
ಜಾಗತಿಕ ಆರ್ಥಿಕತೆ 2009ರಲ್ಲಿ ಇನ್ನೂ ಶೇಕಡಾ ಒಂದರಿಂದ ಎರಡಷ್ಟು ಕುಗ್ಗಲಿದ್ದು, ಆರ್ಥಿಕ ಕುಸಿತ ಪರೋಕ್ಷವಾಗಿ ಹಸುಳೆಗಳ ಸಾವಿಗೂ ಕಾರಣವಾಗಲಿದೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ.

ಬ್ರುಸೆಲ್ಸ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ರಾಬರ್ಟ್ ಝೋಲಿಕ್, ಈಗ ಕಂಡಿರುವ ಆರ್ಥಿಕ ಕುಸಿತ ಹಿಂದೆಂದೂ ಕಾಣದಂತಹುದು. 1930ರ ನಂತರ ಕಂಡ ಬಹುದೊಡ್ಡ ಆರ್ಥಿಕ ಕುಸಿತ ಇದಾಗಿದ್ದು, ಪರೋಕ್ಷವಾಗಿ ಈ ಕುಸಿತ ನಾಲ್ಕು ಲಕ್ಷ ಹಸುಳೆಗಳ ಸಾವಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಅಂದಾಜಿನ ಪ್ರಕಾರ ಈ ವರ್ಷದ ಆರ್ಥಿಕ ಕುಸಿತ ಇನ್ನೂ ಶೇ.1ರಿಂದ 2ರಷ್ಟು ಹೆಚ್ಚಲಿದೆ. ವಿಶ್ವದ ಎರಡನೇ ಮಹಾಯುದ್ಧದ ಸಮಯದಲ್ಲಿ ಕಂಡ ಇಂತಹ ಆರ್ಥಿಕ ಕುಸಿತ ಈವರೆಗೆ ಕಂಡಿರಲಿಲ್ಲ. ಇದು ಆರ್ಥಿಕ ವಲಯಕ್ಕೆ ಆಗಿರುವ ಬಹುದೊಡ್ಡ ಆಘಾತ. ಇದರಿಂದ ಚೇತರಿಸಿಕೊಳ್ಳಲು ಸಮಯ ಬೇಕು. ಆದರೂ ಇಂತಹ ಆಘಾತದಿಂದ ಹೊರಬರಲು ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಆರ್ಥಿಕ ಕುಸಿತದ ಪರೋಕ್ಷ ಪರಿಣಾಮದಿಂದಾಗಿ ಈ ವರ್ಷ ನಾಲ್ಕು ಲಕ್ಷ ಹಸುಳೆಗಳ ಸಾವಿಗೆ ಶರಣಾಗಬೇಕಾದೀತು ಎಂದು ಅಂದಾಜಿಸಲಾಗಿದೆ. ಇಂತಹ ಸಂದರ್ಭ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗದೇ ಹೋದಲ್ಲಿ ಖಂಡಿತ ಮುಂದಿನ ಜನಾಂಗವನ್ನೇ ನಾವು ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದ ಅವರು, ಶ್ರೀಮಂತ ದೇಶಗಳು ಈ ದಿಸೆಯಲ್ಲಿ ಸಹಕಾರ ತೋರಬೇಕು ಎಂದು ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೈಗಾರಿಕೆಗಳಿಗೆ ಕಾಯಕಲ್ಪ ನೀಡಿದ ಪ್ಯಾಕೇಜ್‌
ಬಾಂಡ್‌ಗಳ ಖರೀದಿಗೆ ಆರ್‌ಬಿಐ ನಿರ್ಧಾರ
ಅಮೆರಿಕ: ಎರಡೇ ತಿಂಗಳಲ್ಲಿ ಮುಳುಗಿದ 16 ಬ್ಯಾಂಕ್‌ಗಳು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ನ್ಯಾನೋ :ವಾಹನೋದ್ಯಮಕ್ಕೆ ಐತಿಹಾಸಿಕ ತಿರುವು
ಭಾರತ್ ಆರ್ತ್ ಮ‌ೂವರ್ಸ್-ಎನ್‌ಎಫ್‌ಎಂ ಟೆಕ್ನಾಲಜಿ ಜತೆ ಒಪ್ಪಂದ