ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಏರ್‌ಇಂಡಿಯಾಗೆ ದೇಶಿಯ ಹಾರಾಟಕ್ಕಾಗಿ 12 ವಿಮಾನಗಳ ಖರೀದಿಗೆ 1 ಬಿಲಿಯನ್ ಡಾಲರ್ ಸಾಲ ನೀಡಿಕೆ ಕುರಿತಂತೆ ಮಾತುಕತೆ ನಡೆಯುತ್ತಿದ್ದು,ಶೀಘ್ರದಲ್ಲಿ ಸಾಲ ಮಂಜೂರು ಮಾಡಲಾಗುವುದು ಎಂದು ಐಡಿಬಿಐ ಬ್ಯಾಂಕ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಜಿತೇಂದರ್ ಬಾಲಕೃಷ್ಣನ್ ಹೇಳಿದ್ದಾರೆ. ನ್ಯಾಷನಲ್ ಏವಿಯೇಶನ್ ಕಂಪೆನಿ ಆಫ್ ಇಂಡಿಯಾ ಲಿಮಿಟೆಡ್ ಮಾಲೀಕತ್ವದ ಏರ್ ಇಂಡಿಯಾ, ಶೀಘ್ರದಲ್ಲಿ ಒಪ್ಪಂದ ಮುಕ್ತಾಯವಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದು, ದೇಶಿಯ ಹಾರಾಟವನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ 43 ವಿಮಾನಗಳಲ್ಲಿ 12 ವಿಮಾನಗಳ ಖರೀದಿಗೆ ಐಡಿಬಿಐ ಬ್ಯಾಂಕ್‌ನಿಂದ ಸಾಲವನ್ನು ಪಡೆಯಲು ನಿರ್ಧರಿಸಿದೆ ಏರ್‌ಇಂಡಿಯಾ ಮೂಲಗಳು ತಿಳಿಸಿವೆ. ಐಡಿಬಿಐ ಬ್ಯಾಂಕ್ ಮತ್ತಿತರ ಹತ್ತು ಬ್ಯಾಂಕ್‌ಗಳ ಸಹಯೋಗದೊಂದಿಗೆ 1 ಬಿಲಿಯನ್ ಡಾಲರ್ ಹಣವನ್ನು ಹೊಂದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಮತ್ತಷ್ಟು ಬ್ಯಾಂಕ್‌ಗಳು ಒಪ್ಪಂದದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ.ಸಾಲದ ಮೊತ್ತವನ್ನು ಒಪ್ಪಂದದಲ್ಲಿ ಭಾಗಿಯಾದ ಬ್ಯಾಂಕ್‌ಗಳಿಗೆ ಸಮಾನಾಂತರವಾಗಿ ಕ್ರೂಢಿಕರಿಸಲು ಮಾಹಿತಿ ನೀಡಲಾಗಿದೆ. ಐಡಿಬಿಐ ಬ್ಯಾಂಕ್ ಇತ್ತೀಚೆಗೆ ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್‌ಗೆ ಸಹಾಯ ಹಸ್ತ ನೀಡಲು 300 ಕೋಟಿ ರೂಪಾಯಿಗಳ ಸಾಲವನ್ನು ನೀಡಿದೆ ಎಂದು ಐಡಿಬಿಐ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣನ್ ಹೇಳಿದ್ದಾರೆ. |