ಬಹು ನಿರೀಕ್ಷಿತ ಪೀಪಲ್ಸ್ ಕಾರು ನ್ಯಾನೋ 2999 ರೂಪಾಯಿಗಳನ್ನು ಪಾವತಿಸಿ ಏಪ್ರಿಲ್ 9 ರಿಂದ ಏಪ್ರಿಲ್ 25ರೊಳಗಾಗಿ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.ಟಾಟಾ ಮೋಟಾರ್ಸ್‌ನ ಕನಸಿನ ಕೂಸಾದ ನ್ಯಾನೋ ಮಧ್ಯಮ ವರ್ಗದ ಜನತೆಯ ಆಶಾಕಿರಣವಾಗಿದ್ದು, ಕೇವಲ 300 ರೂ.ಗಳನ್ನು ನೀಡಿ ಮುಂಗಡ ಬುಕ್ಕಿಂಗ್‌ನ ಅರ್ಜಿಯನ್ನು ಪಡೆಯಬಹುದಾಗಿದೆ. ನ್ಯಾನೋ ಕಾರಿಗೆ 18 ತಿಂಗಳ ಅಥವಾ 24 ಸಾವಿರ ಕಿ.ಮಿ ವಾರೆಂಟಿ ನೀಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.ಟಾಟಾ ಮೋಟಾರ್ಸ್ ಪ್ರಥಮ ವರ್ಷದಲ್ಲಿ ಕೇವಲ 1 ಲಕ್ಷ ಕಾರುಗಳನ್ನು ಮಾತ್ರ ಮುಂಗಡ ಬುಕ್ಕಿಂಗ್‌ಗೆ ಅನುಮತಿ ನೀಡಿದೆ. ಈಗಾಗಲೇ ದೇಶದಾದ್ಯಂತ 1 ಸಾವಿರ ನಗರಗಳಲ್ಲಿ 30 ಸಾವಿರ ಕಾರುಗಳಿಗಾಗಿ ಮುಂಗಡ ಬುಕ್ಕಿಂಗ್ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಟಾಟಾ ಮೋಟಾರ್ಸ್ ಆರಂಭಿಕ ವರ್ಷದಲ್ಲಿ 1 ಲಕ್ಷ ಕಾರುಗಳನ್ನು ತಯಾರಿಸುವ ಗುರಿಯನ್ನುವ ಹೊಂದಲಾಗಿದ್ದು, ಉತ್ತರಖಾಂಡ್‌ನ ಪಂಥನಗರದಿಂದ 50,000-60,000 ಕಾರುಗಳನ್ನು ತಯಾರಿಸಲಾಗುವುದು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾನೋ ಕಾರು ವಿಝ್ ಸ್ಟ್ಯಾಂಡರ್ಡ್ , ಸಿಎಕ್ಸ್ ಮತ್ತು ಎಲ್‌ಎಕ್ಸ್ ಮಾಡೆಲ್‌ಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ.ಗ್ರಾಹಕರಿಗೆ ಕಾರುಗಳ ಸರಬರಾಜು ಕಾರ್ಯ ಜುಲೈ ತಿಂಗಳಲ್ಲಿ ಆರಂಭವಾಗಲಿದ್ದು, ಗ್ರಾಹಕರ ಆಯ್ಕೆಯನ್ನು ಡ್ರಾ ಮೂಲಕ ಮಾಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.ಸಿಂಗೂರ್ ಘಟಕ ವಿವಾದ ಕುರಿತಂತೆ ಮಾತನಾಡಿದ ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ, ಸಿಂಗೂರ್ ಭೂಮಿಯ ಕುರಿತಂತೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. |