ಜಗತ್ತಿನ ಕಡಿಮೆ ದರದ ಬಹು ನಿರೀಕ್ಷಿತ ನ್ಯಾನೋ ಕಾರು ಇಂದು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹಿನ್ನೆಲೆಯಲ್ಲಿ ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್ ಶೇರುಗಳು ಶೇ.8 ರಷ್ಟು ಏರಿಕೆ ಕಂಡಿವೆ. ಶೇರುಪೇಟೆಯಲ್ಲಿ ಟಾಟಾ ಮೋಟಾರ್ಸ್ ಶೇರುಗಳು ಸ್ಥಿರತೆಯೊಂದಿಗೆ ಆರಂಭವಾಗಿ ಶೇ.8 ರಷ್ಟು ಶೇರುದರಗಳಲ್ಲಿ ಏರಿಕೆಯಾಗಿ 173.85 ರೂ.ಗಳಿಗೆ ತಲುಪಿತು. ಆದರಂತೆ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸೂಚ್ಯಂಕ ಕೂಡಾ ಶೇ.7.76 ರಷ್ಟು ಏರಿಕೆ ಕಂಡು 173.40 ರೂ.ಗಳಿಗೆ ಏರಿಕೆಯಾಯಿತು.ಆಧುನಿಕ ಭಾರತದ ವಾಹನೋದ್ಯಮ ಕ್ಷೇತ್ರದಲ್ಲಿ ನ್ಯಾನೋ ಇಂದು ಬಿಡುಗಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಹತ್ತರ ಪಾತ್ರವಹಿಸುವ ನಿರೀಕ್ಷೆಯಿಂದಾಗಿ ಹೂಡಿಕೆದಾರರು ಟಾಟಾ ಮೋಟಾರ್ಸ್ ಶೇರುಗಳ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಿಎಸ್‌ಇ ಶೇರುಪೇಟೆಯಲ್ಲಿ 6.2 ಲಕ್ಷಕ್ಕೂ ಹೆಚ್ಚಿನ ಶೇರುಗಳನ್ನು ಗ್ರಾಹಕರು ಖರೀದಿಸಿದ್ದು, ರಾಷ್ಟ್ರೀಯ ಶೇರುಪೇಟೆ ನಿಫ್ಟಿಯಲ್ಲಿ ಕೂಡಾ ಟಾಟಾ ಮೋಟಾರ್ಸ್‌ನ ಸುಮಾರು 20.36 ಲಕ್ಷ ಶೇರುಗಳು ವಹಿವಾಟು ನಡೆಸಿವೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ. |