ಕೋಲ್ಕತಾ ಮೂಲದ ನ್ಯಾಷನಲ್ ಇನ್‌ಶ್ಯೂರೆನ್ಸ್ ಕಂಪೆನಿ, ದೃಶ್ಯ ಸಂಕೇತ ಹಾಗೂ ಲಾಂಛನವನ್ನು ಬದಲಿಸಲಾಗಿದೆ ಎಂದು ಘೋಷಿಸಿದ್ದು, ವ್ಯವಸ್ಥೆ ಮತ್ತು ಗ್ರಾಹಕರ ಲಾಭಕ್ಕಾಗಿ ಕಾರ್ಯಕಾರಿ ಬದಲಾವಣೆಗಳನ್ನು ಮಾಡಬಹುದಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಗ್ರಾಹಕರ ಸಂಪರ್ಕವನ್ನು ಸುಲಭಗೊಳಿಸಲು ಎಚ್‌ಸಿಎಲ್ ಟೆಕ್ನಾಲಾಜೀಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದಾಗಿ ದೇಶದಾದ್ಯಂತವಿರುವ 1 ಸಾವಿರ ಕಚೇರಿಗಳು ಹಾಗೂ 16 ಸಾವಿರ ಗ್ರಾಹಕರ ಸೇವೆಗಳನ್ನು ಎಚ್‌ಸಿಎಲ್ ಟೆಕ್ನಾಲಾಜೀಸ್ ಒದಗಿಸುತ್ತದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕೋರ್ ಇನ್ಶೂರೆನ್ಸ್ , ಬಿಜಿನೆಸ್ ಅನಾಲಾಯಟಿಕ್ಸ್, ಹ್ಯೂಮನ್ ರಿಸೊರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್ , ಕಸ್ಟಮರ್ ರಿಲೇಶಿಪ್ ಮ್ಯಾನೇಜ್‌ಮೆಂಟ್ ಮತ್ತು ನಾಲೇಜ್ ಮ್ಯಾನೇಜ್‌ಮೆಂಟ್ ಸೇವೆಯಿಂದಾಗಿ ಟ್ರಾನ್ಸ್‌ಫಾರ್ಮೇಶನ್ ಟು ಇಂಟಿಗ್ರೇಶನ್ ಮತ್ತು ಆಪರೇಶನ್ಸ್ ಮ್ಯಾನೇಜ್‌ಮೆಂಟ್‌ವರೆಗೆ ಸೇವೆ ನೀಡಿದಂತಾಗುತ್ತದೆ. ಲಾಂಛನ ಬದಲಾವಣೆ ಕೇವಲ ಸಂಕೇಚತದ ಬದಲಾವಣೆಯಲ್ಲ. ಸಂಸ್ಥೆಯ ಕಾರ್ಯವಿಧಾನದಲ್ಲಿ ಕೂಡಾ ಬದಲಾವಣೆಯ ಸಲಹೆ ನೀಡಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿ.ರಾಮಾಸ್ವಾಮಿ ಸಮಾರಂಭದಲ್ಲಿ ಮಾತನಾಡಿ, ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ. ಸರಳ ಕಾರ್ಯನೀತಿಯನ್ನು ಜಾರಿಗೊಳಿಸಿ ಪ್ರಾಮಾಣಿಕ ಸೇವೆಯನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ. ಕಂಪೆನಿಯ ಲಾಂಛನ ನವಿಲಿನ ಚಿತ್ರವನ್ನು ಸರಳಗೊಳಿಸಿದ್ದು, ಥೋಡಾ ಸಿಂಪಲ್ ಸೋಚೊ ಎನ್ನುವ ಫಿಲಾಸಫಿಯಂತೆ ಲಾಂಛನ ಚಿತ್ರವನ್ನು ಸರಳಗೊಳಿಸಲಾಗಿದೆ. ನೂತನ ಲಾಂಛನ ನವಿಲಿನ ಚಿತ್ರ ಧೈರ್ಯಶಾಲಿ ಮತ್ತು ಅಭಿಮಾನವನ್ನು ತೋರಿಸುತ್ತದೆ. ತ್ರಿಕೋನದಲ್ಲಿರುವ ನವಿಲಿನಲ್ಲಿ ಕಂಪೆನಿಯ ಪೂರ್ಣ ಹೆಸರನ್ನು ಬರೆಯುವ ಬದಲಾಗಿ ಸ್ಪಷ್ಟವಾದ ಅಕ್ಷರಗಳಿಂದ ಎನ್‌ಐಸಿಯೆಂದು ಬರೆಯಲಾಗಿದೆ. ಉಲ್ಲಾಸ ಮತ್ತು ಹರೆಯವನ್ನು ಬಿಂಬಿಸಲು ನೀಲಿ ಬಣ್ಣವನ್ನು ಅಳವಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿ.ರಾಮಸ್ವಾಮಿ ಮುಂದುವರಿದು ಮಾತನಾಡಿ, ಕಂಪೆನಿಯ ಕಾರ್ಯವಿಧಾನದ ಗುಣಮಟ್ಟ, ಸೇವಾ ನಾಯಕತ್ವಗಳಿಂದಾಗಿ ಗ್ರಾಹಕರು ತೃಪ್ತಿ ವ್ಯಕ್ತಪಡಿಸಿದ್ದರಿಂದ ದೇಶದಾದ್ಯಂತ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿರುವುದೇ ಸಾಕ್ಷಿಯಾಗಿದೆ. ನೂತನ ಲಾಂಛನ ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವುದಾಗಿದೆ.ಶಾಖಾ ಕಚೇರಿಗಳನ್ನು ವಿಸ್ತರಿಸಿ ನೂತನ ವ್ಯವಸ್ಥೆ ಹಾಗೂ ತಾಂತ್ರಿಕತೆಯಿಂದಾಗಿ ಗ್ರಾಹಕರಿಗೆ ಸುಲಭ ಸೌಲಭ್ಯವನ್ನು ಒದಗಿಸಲು ಕಂಪೆನಿ ಸದಾ ಸಿದ್ದವಾಗಿದೆ. ಕಂಪೆನಿಯ ಗ್ರಾಹಕರ ಸಂಖ್ಯೆಯಲ್ಲಿ ನಿರಂತರ ಏರಿಕೆಯಿಂದಾಗಿ ನಾವು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದೇವೆ ಎನ್ನುವುದಕ್ಕೆ ಹೆಮ್ಮೆಯಾಗಿದೆ ಎಂದು ಹೇಳಿದ್ದಾರೆ. |