ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನ್ಯಾನೋ ಅಲೆ: ನ್ಯಾನೋ ವಾಚ್, ಟಿ-ಶರ್ಟ್, ಕೀಚೈನುಗಳೂ ಲಭ್ಯ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಅಲೆ: ನ್ಯಾನೋ ವಾಚ್, ಟಿ-ಶರ್ಟ್, ಕೀಚೈನುಗಳೂ ಲಭ್ಯ!
ಜಗತ್ತಿನಾದ್ಯಂತ ಟಾಟಾದ ನ್ಯಾನೋ ಅಲೆಯೇ ಮೇಳೈಸಿದೆ. ಭಾರತೀಯ ಸಾಮಾನ್ಯ ಮನುಷ್ಯನ ಕಾರಿನ ಕನಸನ್ನು ನನಸಾಗಿಸಲು ತಪಸ್ಸನ್ನೇ ಮಾಡಿದ ರತನ್ ಟಾಟಾರ ಟಾಟಾ ಸಂಸ್ಥೆಯ ಇತರ ರೀಟೈಲ್ ಸರಣಿಗೆ ಇದೀಗ ಅದೃಷ್ಟ ಖುಲಾಯಿಸಲಿದೆ ಎಂದೇ ಉದ್ಯಮ ವಲಯದಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ.

ಟಾಟಾ ಸಂಸ್ಥೆಯ ಇತರ ರೀಟೈಲ್ ಸರಣಿಯ ಬ್ರ್ಯಾಂಡ್‌ಗಳಾದ ವೆಸ್ಟ್‌ಸೈಡ್, ಕ್ರೋಮಾ ಎಲೆಕ್ಟ್ರಾನಿಕ್ ಸ್ಟೋರ್‌ಗಳು, ಟೈಟಾನ್ ವಾಚ್ ಹಾಗೂ ಇಂಡಿಕಾಮ್ ಟೆಲಿಕಾಂ ಬ್ಯುಸಿನೆಸ್‌ಗೆ ಈಗ ಶುಕ್ರದೆಸೆಯಂತೆ. ಈಗ ಇಲ್ಲಿ ನ್ಯಾನೋ ವಾಚ್, ನ್ಯಾನೋ, ಕೀಚೈನ್, ನ್ಯಾನೋ ಟಿ-ಶರ್ಟ್‌ಗಳೂ ಲಭ್ಯವಾಗುತ್ತಿದ್ದು, ಯುವ ಪೀಳಿಗೆಯನ್ನು ಆಕರ್ಷಿಸುತ್ತಿವೆ.

ಈಗ ಈ ಬ್ರ್ಯಾಂಡ್‌ಗಳ ಔಟ್‌ಲೆಟ್‌ಗಳು ಹಾಗೂ ಶೋರೂಂಗಳು ನ್ಯಾನೋ ಅರ್ಜಿಯನ್ನು ವಿತರಿಸಲು ಆರಂಭಿಸಿರುವುದರಿಂದ ಈ ರೀಟೈಲ್ ಸರಣಿಯ ಮಳಿಗೆಗಳಲ್ಲಿ ಈಗ ಜನರು ಹರಿದುಬರಲಾರಂಭಿಸಿದ್ದಾರೆ. ಜತೆಗೆ ಈಗ ಹುಟ್ಟಿದ ನ್ಯಾನೋ ಅಲೆಯಲ್ಲಿ ಜನರನ್ನು ಆಕರ್ಷಿಸಲು ನ್ಯಾನೋ ಮೊಬೈಲ್ ಸೆಟ್‌ಗಳು, ನ್ಯಾನೋ ವಾಚ್‌ಗಳು, ನ್ಯಾನೋ ಟಿ-ಶರ್ಟ್‌ಗಳು ಹಾಗೂ ನ್ಯಾನೋ ಕೀಚೈನ್‌ಗಳು ಈಗ ಟಾಟಾ ಗುಂಪಿನ ಶೋರೂಂಗಳಲ್ಲಿ ಹಾಗೂ ನ್ಯಾನೋ ವೆಬ್‌ಸೈಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿವೆ.

ಇಂತಹ ಹೊಸ ನ್ಯಾನೋ ಬ್ಯ್ರಾಂಡ್‌ಗಳು ಯುವ ಪೀಳಿಗೆಯನ್ನು ಆಕರ್ಷಿಸುತ್ತಿದ್ದು, ಯುವಕರ- ಯುವತಿಯರಲ್ಲಿ ಫ್ಯಾಷನ್ ಅಲೆಯನ್ನು ಸೃಷ್ಟಿಸಿದೆ. ಅಲ್ಲದೆ, ಟಾಟಾದ ಮೊಬೈಲ್ ಗೇಮ್- ಟಾಟಾ ಝೋನ್ ಎಂದು ಹೊಸ ಆಟವೂ ಆರಂಭವಾಗಿದೆ. ಇವೆಲ್ಲ ಯುವ ಪೀಳಿಗೆಯನ್ನು ಸೆಳೆಯುತ್ತಿವೆ.

ಟಾಟಾದ ರೀಟೈಲ್ ಸರಣಿಯ ಪೈಕಿ, ವೆಸ್ಟ್‌ಸೈಡ್ 37 ಸ್ಟೋರ್‌ಗಳು, ಕ್ರೋಮಾದ 20 ಔಟ್‌ಲೆಟ್‌ಗಳು, ಟೈಟಾನ್‌ನ 222 ಹಾಗೂ ಟಾಟಾ ಇಂಡಿಕಾಂನ 900 ಔಟ್‌ಲೆಟ್‌ಗಳು ಇವೆ. ನ್ಯಾನೋ ಅಲೆಯಿಂದ ಈಗ ಇವುಗಳ ವ್ಯಾಪಾರವೂ ಸಹಜವಾಗಿಯೇ ಏರಲಿದೆ ಎಂದು ಉದ್ಯಮ ವಲಯದಲ್ಲಿ ವಿಮರ್ಶಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾಷನಲ್‌ ಇನ್ಶೂರೆನ್ಸ್‌ ಕಂಪೆನಿಯ ಲಾಂಛನ ಬದಲಾವಣೆ
ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಕ್ಕಳ ದುರ್ಬಳಕೆ
ಏಪ್ರಿಲ್‌ನಲ್ಲಿ ಎಸ್‌ಬಿಐ ಅಧಿಕಾರಿಗಳ ಮುಷ್ಕರ
ಮಾತಿಗೆ ತಪ್ಪದ ಟಾಟಾ: ನ್ಯಾನೋ ಬಿಡುಗಡೆ
ನ್ಯಾನೋ: ಟಾಟಾ ಶೇರುಗಳಲ್ಲಿ ಶೇ.8 ರಷ್ಟು ಏರಿಕೆ
ಏಪ್ರಿಲ್ 9 ರಿಂದ ನ್ಯಾನೋ ಬುಕ್ಕಿಂಗ್ ಆರಂಭ