ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನ್ಯಾನೋ ಗ್ರಾಹಕರಿಗೆ ಎಸ್‌ಬಿಐ ಸಾಲ ಸೌಲಭ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಗ್ರಾಹಕರಿಗೆ ಎಸ್‌ಬಿಐ ಸಾಲ ಸೌಲಭ್ಯ
PTI
ಟಾಟಾ ಮೋಟಾರ್ಸ್‌ನೊಂದಿಗೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ವಿಶೇಷ ಒಪ್ಪಂದಕ್ಕೆ ಬರಲಾಗಿದ್ದು,ನ್ಯಾನೋ ಆಸಕ್ತರಿಗಾಗಿ ಸಾಲ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಒಪ್ಪಂದ ಪ್ರಕಾರ ದೇಶದಾದ್ಯಂತವಿರುವ 850 ನಗರಗಳ 1350 ಶಾಖೆಗಳಲ್ಲಿ ನ್ಯಾನೋ ಕಾರು ಮುಂಗಡ ಬುಕ್ಕಿಂಗ್‌ಗೆ ಸೇವೆ ನೀಡಲಾಗುತ್ತಿದೆ ಎಂದು ಎಸ್‌ಬಿಐ ಹೇಳಿಕೆ ನೀಡಿದೆ.

ನ್ಯಾನೋ ಕಾರು ಬುಕ್ಕಿಂಗ್‌ಗಾಗಿ ಅರ್ಜಿಗಳನ್ನು ಬ್ಯಾಂಕ್‌ ವಿತರಿಸುತ್ತಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಮುಂಗಡ ಹಣದ ಜೊತೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ನ್ಯಾನೋ ಖರೀದಿಸಬಯಸುವ ಗ್ರಾಹಕರಿಗೆ ಶೇ.100 ರಷ್ಟು ಸಾಲ ಸೌಲಭ್ಯವನ್ನು ಏಳು ವರ್ಷಗಳ ಅವಧಿಗೆ ಶೇ.11.75 - 12 ವರೆಗೆ ಬಡ್ಡಿ ದರವನ್ನು ವಿಧಿಸಲಾಗುತ್ತಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ನ್ಯಾನೋ ಮುಂಗಡ ಬುಕ್ಕಿಂಗ್‌ನ ಅರ್ಜಿಗಳು ಏಪ್ರಿಲ್ 9 ರಿಂದ ಏಪ್ರಿಲ್ 25 ರವರೆಗೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಲ್ಲಿ ದೊರೆಯಲಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯಾನೋ, ಗ್ರಾಹಕ, ಎಸ್ಬಿಐ, ಸಾಲ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ನ್ಯಾನೋ:ಸೆಕೆಂಡ್ ಹ್ಯಾಂಡ್‌ ಕಾರುಗಳ ವಹಿವಾಟು ಕುಸಿತ
ನ್ಯಾನೋ ಅಲೆ: ನ್ಯಾನೋ ವಾಚ್, ಟಿ-ಶರ್ಟ್, ಕೀಚೈನುಗಳೂ ಲಭ್ಯ!
ನ್ಯಾಷನಲ್‌ ಇನ್ಶೂರೆನ್ಸ್‌ ಕಂಪೆನಿಯ ಲಾಂಛನ ಬದಲಾವಣೆ
ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಕ್ಕಳ ದುರ್ಬಳಕೆ
ಏಪ್ರಿಲ್‌ನಲ್ಲಿ ಎಸ್‌ಬಿಐ ಅಧಿಕಾರಿಗಳ ಮುಷ್ಕರ