ಟಾಟಾದ ನ್ಯಾನೋ ಕೊಳ್ಳಲು ಆಸಕ್ತಿಯಿದ್ದರೂ, ಹೇಗೆ, ಏನು, ಎತ್ತ ಎಂಬ ಮಾಹಿತಿಗಳು ಹಲವರಿಗೆ ಇಲ್ಲ. ಹೀಗಾಗಿ ಕೊಳ್ಳಲು ಆಸಕ್ತಿಯಿರುವವರಿಗೆ ಇಲ್ಲಿ ಕೆಲವು ಅಗತ್ಯ ಮಾಹಿತಿಗಳು ಇಲ್ಲಿವೆ.1. ಏಪ್ರಿಲ್ ಒಂದರಿಂದ ಟಾಟಾ ಮೋಟಾರ್ಸ್ ಶೋರೂಂಗಳಲ್ಲಿ ನ್ಯಾನೋ ನೋಡಲು ಲಭ್ಯ.2. ಏ.9ರಿಂದ ನ್ಯಾನೋ ಅರ್ಜಿ/ ಬುಕ್ಕಿಂಗ್ ಲಭ್ಯ. ಅರ್ಜಿ ಪ್ರತಿಗೆ 300 ರೂ.3. ಮೊದಲ ಹಂತದ ಬುಕ್ಕಿಂಗ್‌ಗೆ ಏ.25 ಅಂತಿಮ ದಿನಾಂಕ.4. ಅರ್ಜಿಗಳು ದೇಶದ ಒಂದು ಸಾವಿರ ನಗರಗಳ 30 ಸಾವಿರ ಕಡೆಗಳಲ್ಲಿ ಲಭ್ಯ.5. ಅರ್ಜಿ ನಮೂನೆ ಭರ್ತಿ ಮಾಡಿ ದೇಶದ 850 ನಗರಗಳ ನಿರ್ಧಿಷ್ಟ 1,350 ಬ್ರ್ಯಾಂಚ್‌ಗಳಲ್ಲಿ ಯಾವುದಾದರೂ ಒಂದು ಶಾಖೆಗೆ ನೀಡಬಹುದು.6. 15 ಬ್ಯಾಂಕ್‌ಗಳು ನ್ಯಾನೋ ಬುಕ್ಕಿಂಗ್ ಲೋನ್ ನೀಡುತ್ತವೆ.7. ಆನ್‌ಲೈನ್ ಬುಕ್ಕಿಂಗ್ ಮಾಡಬೇಕಿದ್ದರೆ www.tatanano.com ಸಂಪರ್ಕಿಸಿ.8. ಜುಲೈ 1ರಿಂದ ನ್ಯಾನೋ ಗ್ರಾಹಕರಿಗೆ ವಿತರಿಸಲು ಆರಂಭ.9. ಮೊದಲ ಒಂದು ಲಕ್ಷ ನ್ಯಾನೋ ಕಾರುಗಳು ಬಿಡುಗಡೆಯಾದ ದರಕ್ಕೆ ಲಭ್ಯ.10. ಮೊದಲ ಒಂದು ಲಕ್ಷ ಅರ್ಜಿಗಳನ್ನು ಲಾಟರಿ ಮೂಲಕ ಆಯ್ಕೆ.11. ಮೂರು ಮಾದರಿಗಳಲ್ಲಿ ಟಾಟಾ ನ್ಯಾನೋ ಸಿಗಲಿದೆ.12. ' ಟಾಟಾ ನ್ಯಾನೋ ಸ್ಟಾಂಡರ್ಡ್' ಎಂಬ ಮಾದರಿಯಲ್ಲಿ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಸಿಂಗಲ್-ಟೋನ್ ಸೀಟ್‌ಗಳು ಹಾಗೂ ಫೋಲ್ಡ್ ಡೌನ್ ಸೀಟ್ ಸೌಲಭ್ಯಗಳು ಇದರಲ್ಲಿವೆ.13. ' ಟಾಟಾ ನ್ಯಾನೋ-ಸಿಎಕ್ಸ್' ಎಂಬ ಮಾದರಿಯಲ್ಲಿ ಐದು ಬಣ್ಣಗಳಲ್ಲಿ ಲಭ್ಯ. ಟು-ಟೋನ್ ಸೀಟ್‌ಗಳು, ಪಾರ್ಸೆಲ್ ಶೆಲ್ಫ್, ಬೂಸ್ಟರ್- ಅಸಿಸ್ಟೆಡ್ ಬ್ರೇಕ್, ನ್ಯಾಪ್ ರೆಸ್ಟ್ ಇರುವ ಫೋಲ್ಡ್ ಡೌನ್ ಸೌಲಭ್ಯದ ಸೀಟುಗಳ ಸೌಲಭ್ಯ ಇದರಲ್ಲಿವೆ.14. ' ಟಾಟಾ ನ್ಯಾನೋ ಎಲ್ಎಕ್ಸ್' ಎಂಬ ಮಾದರಿಯಲ್ಲಿ ನ್ಯಾನೋ ಸಿಎಕ್ಸ್‌ನಲ್ಲಿರುವ ಸೌಲಭ್ಯಗಳನ್ನು ಒಳಗೊಳ್ಳುವ ಜತೆಗೆ ಹೆಚ್ಚಿನ ಸೌಲಭ್ಯಗಳನ್ನು ಇದು ಹೊಂದಿದೆ. ಫ್ಯಾಬ್ರಿಕ್ ಸೀಟ್‌ಗಳು, ಸೆಂಟ್ರಲ್ ಲಾಕಿಂಗ್, ಫ್ರಂಟ್ ಪವರ್ ವಿಂಡೋಸ್, ಫಾಗ್ ಲ್ಯಾಂಪ್, ಪ್ರೀಮಿಯಂ ಕಲರ್ ಬಾಡಿ, ಎಲೆಕ್ಟ್ರಾನಿಕ್ ಟ್ರಿಪ್ ಮೀಟರ್, ಕಪ್ ಹೋಲ್ಡರ್, ಮೊಬೈಲ್ ಚಾರ್ಜರ್ ಪಾಯಿಂಟ್ ಮತ್ತಿತರ ಸೌಲಭ್ಯಗಳನ್ನು ಇದು ಹೊಂದಿದೆ. ಇಂತಹ ಹಲವು ಸೌಲಭ್ಯಗಳು ದೇಶದ ಹಲವು ಸಣ್ಣ ಕಾರುಗಳಲ್ಲಿ ಇಲ್ಲ. |