ಕೇಂದ್ರ ಸರಕಾರ ಘೋಷಿಸಿದ ಪ್ಯಾಕೇಜ್‌ಗಳು ಮುಂಬರುವ 6 ರಿಂದ 7 ತಿಂಗಳ ಅವಧಿಯಲ್ಲಿ ಪರಿಣಾಮ ಬೀರಲು ಆರಂಭಿಸಲಿದ್ದು, ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳುವ ಭರವಸೆಯಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಇಂಧನ ಮತ್ತು ಅಹಾರ ಧಾನ್ಯಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ ಹಣದುಬ್ಬರ ಕುಸಿತಗೊಂಡಿದೆ ಎಂದು ತಿಳಿಸಿದ್ದಾರೆ.ಅಕ್ಟೋಬರ್ ತಿಂಗಳ ನಂತರ ದೇಶದ ಆರ್ಥಿಕ ಅಭಿವೃದ್ಧಿ ದರ ಸುಸ್ಥಿತಿಗೆ ಬರಲಿದ್ದು, ಶೇ.7 ರ ಜಿಡಿಪಿ ಗುರಿಯನ್ನು ತಲುಪಲಿದ್ದು, ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. |