ತುರ್ಕಿ ದೇಶದ ಸರಕಾರ ಭಾರತದ ವಸ್ತ್ರೋದ್ಯಮದ ಮೇಲೆ ಅಮುದು ತೆರಿಗೆಯನ್ನು ಮೂರುಪಟ್ಟು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಮುಂಬರುವ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಭಾರತ ಮತ್ತು ತುರ್ಕಿ ದೇಶದ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ವ್ಯಾಪಾರ ಒಪ್ಪಂದ ಕುರಿತಂತೆ ಉಭಯ ದೇಶಗಳ ಅಧಿಕಾರಿಗಳು ಏಪ್ರಿಲ್ 6 ರಂದು ಜಿನೇವಾದಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತುರ್ಕಿ ದೇಶಕ್ಕೆ ಭಾರತ 239 ಮಿಲಿಯನ್ ಡಾಲರ್ ಮೊತ್ತದ ವಹಿವಾಟು ನಡೆಸುತ್ತಿದ್ದು, ತುರ್ಕಿ ದೇಶದ ಸರಕಾರ ಅಮುದು ತೆರಿಗೆಯನ್ನು ಶೇ.15 ರಷ್ಟು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಭಾರತ ಪ್ರತಿಭಟನೆಯನ್ನು ಸಲ್ಲಿಸಿದೆ.
ಜಾಗತಿಕ ವ್ಯಾಪಾರ ಒಪ್ಪಂದದ ಸುರಕ್ಷತೆಯ ಒಪ್ಪಂದದಂತೆ ತುರ್ಕಿ ದೇಶದ ಅಧಿಕಾರಿಗಳು ಭಾರತದೊಂದಿಗೆ ಮಾತುಕತೆ ನಡೆಸಲು ಸಮ್ಮತಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ದೇಶಗಳ ಮಧ್ಯೆ ಸಂಧಾನ ಫಲಪ್ರದವಾಗದಿದ್ದಲ್ಲಿ ಡಿಎಸ್‌ಬಿ ಮಂಡಳಿಗೆ ದೂರನ್ನು ಸಲ್ಲಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಂಗಾಲಾದ ರಫ್ತು ವಹಿವಾಟುದಾರರು ಗಂಭೀರವಾದ ಸಮಯವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅಮುದು ತೆರಿಗೆಯಲ್ಲಿ ಮೂರು ಪಟ್ಟು ಹೆಚ್ಚಳ ಮಾಡಿರುವುದಕ್ಕೆ ಭಾರತ ಅಸಮಧಾನ ವ್ಯಕ್ತಪಡಿಸಿದೆ. |