ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿತಗೊಂಡ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಶೇ.1.17 ರಷ್ಟು ಇಳಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ. ಚಿನ್ನದ ದರ ಪ್ರತಿ 10 ಗ್ರಾಂಗೆ ಶೇ.1.17 ರಷ್ಟು ಇಳಿಕೆಯಾಗಿ 15,260 ರೂಪಾಯಿಗಳಿಗೆ ತಲುಪಿದೆ.ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ದುರ್ಬಲ ವಹಿವಾಟಿನಿಂದಾಗಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 955 ಡಾಲರ್‌ಗಳಿಂದ 942 ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ಚಿನಿವಾರಪೇಟೆಯ ವ್ಯಾಪಾರಿಗಳು ಮೂಲಗಳು ತಿಳಿಸಿವೆ. |