ಡಾಲರನ್ನು ವಿಶ್ವದ ಏಕೈಕ ಕರೆನ್ಸಿಯನ್ನಾಗಿ ಮಾಡುವ ಸಲಹೆಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಇಬ್ಬರು ಆರ್ಥಿಕ ಅಧಿಕಾರಿಗಳು ತಿರಸ್ಕರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಬಾಮಾ, ಜಾಗತಿಕ ಕರೆನ್ಸಿಯ ಅಗತ್ಯವಿದೆಯೆಂದು ನನಗೆ ಅನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚೆಗೆ ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ವಿಶ್ವದ ಆರ್ಥಿಕತೆಯ ಸಮತೋಲನಕ್ಕೆ ಏಕೈಕ ಜಾಗತಿಕ ಕರೆನ್ಸಿಯ ಅಗತ್ಯವಿದೆ ಎಂದು ಹೇಳಿತ್ತು. ರಷ್ಯಾ ಹಾಗೂ ಚೀನಾ ದೇಶಗಳೂ ಈ ಸಲಹೆಗೆ ದನಿಗೂಡಿಸಿದ್ದವು. ಕಳೆದ ವಾರ ರಷ್ಯಾ, ವಿಶ್ವ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸುತ್ತಿರುವ ರಾಷ್ಟ್ರಗಳಾದ ಭಾರತ, ಚೀನಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮತ್ತಿತರ ದೇಶಗಳಿಗೆ ಇದರಿಂದ ಲಾಭವಾಗುತ್ತದೆ ಎಂದೂ ಅಭಿಪ್ರಾಯಪಟ್ಟಿತ್ತು. ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಕೆವಿನ್ ರುಡ್ ಕೂಡಾ ಇದರ ಅಗತ್ಯವ್ನನು ಒತ್ತಿ ಹೇಳಿದ್ದರು. |