ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏ. 1: ಕಂಪ್ಯೂಟರ್‌ಗೆ ವೈರಸ್ ದಾಳಿ ಮಾಡೀತು ಎಚ್ಚರ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏ. 1: ಕಂಪ್ಯೂಟರ್‌ಗೆ ವೈರಸ್ ದಾಳಿ ಮಾಡೀತು ಎಚ್ಚರ!
ಕಂಪ್ಯೂಟರ್ ಬಳಕೆದಾರರೇ, ಏಪ್ರಿಲ್ 1ರ ಮೂರ್ಖರ ದಿನದಂದು ಮೂರ್ಖರಾಗದಿರಿ! ಅಂದು ಕಂಪ್ಯೂಟರುಗಳಿಗೆ ಅತ್ಯಂತ ಮಾರಕವಾದ ಕಾನ್‌ಫಿಕರ್ ಸಿ (Conficker C) ಎಂಬ ವೈರಸ್ ಬಾಧಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದು ಅತ್ಯಾಧುನಿಕವಾದ ದುರುದ್ದೇಶಪೂರಿತ ಸಾಫ್ಟ್‌ವೇರ್ ಆಗಿದ್ದು, ವಿಶೇಷವಾಗಿ ಬರೆಯಲಾದ ವೆಬ್‌ಪುಟಗಳ ಮೂಲಕ ಪಿಸಿಯೊಂದಕ್ಕೆ ಸ್ವಯಂಚಾಲಿತವಾಗಿ ಅನುಸ್ಥಾಪನೆಗೊಳ್ಳುತ್ತದೆ.

ಆದರೆ ಏನು ಬೇಕಾದರೂ ಆಗಬಹುದು ಎಂದರ್ಥವಲ್ಲ. ಆದರೆ ಅದು ಆ ದಿನಾಂಕದ ಮಾಹಿತಿಗಾಗಿ ಹುಡುಕುವಂತೆ ಅದನ್ನು ವಿನ್ಯಾಸಗೊಳಿಸಲಾಗಿದ್ದು, ಹಲವಾರು ವೆಬ್ ಸೈಟುಗಳಿಗೆ ವ್ಯಾಪಿಸಬಹುದು ಎಂದು ಸೊಫೋಸ್ ಎಂಬ ಕಂಪ್ಯೂಟರ್ ರಕ್ಷಣಾ ತಂತ್ರಜ್ಞಾನದ ಸಂಸ್ಥೆ ಗ್ರಹಾಂ ಕ್ಲೂಲಿ ತಿಳಿಸಿರುವುದಾಗಿ 'ದಿ ಟೈಮ್ಸ್' ವರದಿ ಮಾಡಿದೆ.

ಆದರೆ, ಈ 'ಕಾನ್‌ಫಿಕರ್ ಸಿ' ಕಂಪ್ಯೂಟರಿಗೆ ಯಾವ ರೀತಿಯ ಹಾನಿ ತಂದೊಡ್ಡಬಲ್ಲುದು ಎಂಬುದು ನಿಖರವಾಗಿ ಇನ್ನೂ ತಿಳಿದಿಲ್ಲ.

ಏಪ್ರಿಲ್ 1ರಂದು ಜಗತ್ತಿನ ಲಕ್ಷಾಂತರ ವೈರಸ್ ಸೋಂಕಿತ ಕಂಪ್ಯೂಟರುಗಳಿಗೆ ಸಂದೇಶವೊಂದು ಬಂದು, ಇಂಟರ್ನೆಟ್ ಜಗತ್ತಿನಲ್ಲಿ ಸ್ಪ್ಯಾಮ್ ಇ-ಮೇಲ್ ಸಂದೇಶಗಳ ಪ್ರವಾಹವೇ ಹರಿಯಬಹುದಾಗಿದೆ ಎಂದು ಕಂಪ್ಯೂಟರ್ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಳಂಕಿತ ಸತ್ಯಂಗೂ ದಕ್ಕಿದ ಏರ್‌ಬಸ್ ಸಾಫ್ಟ್‌ವೇರ್ ಪ್ರಾಜೆಕ್ಟ್
ಏಕೈಕ ಜಾಗತಿಕ ಕರೆನ್ಸಿಯ ಅಗತ್ಯವಿಲ್ಲ: ಒಬಾಮಾ
ಸಂಬಾರ ಪದಾರ್ಥಗಳ ರಫ್ತು: ಸಾರ್ವಕಾಲಿಕ ದಾಖಲೆ
ಕರ್ನಾಟಕ ಬ್ಯಾಂಕ್ ಜಪಾನ್‌ನ ಯುಎಸ್‌ಜಿಐಎಲ್ ಜತೆ ಒಪ್ಪಂದ
ಎಚ್‌ಡಿಎಫ್‌ಸಿಯಿಂದ ಮತ್ತಷ್ಟು ಬಡ್ಡಿ ದರ ಕಡಿತ
ಚಿನ್ನದ ದರದಲ್ಲಿ ಅಲ್ಪ ಇಳಿಕೆ