ರೂಪಾಯಿ ಮೌಲ್ಯದ ಕುಸಿತದಿಂದಾಗಿ ಹೆಚ್ಚಿನ ಅಮುದು ದರ ಪಾವತಿಸುತ್ತಿರುವ ಹಿನ್ನೆಲೆಯಲ್ಲಿ ಫೋರ್ಡ್ ಇಂಡಿಯಾ ಕಾರು ತಯಾರಿಕೆ ಸಂಸ್ಥೆ ಮುಂಬರುವ ಏಪ್ರಿಲ್ ತಿಂಗಳಿನಿಂದ ಶೇ.1.5ರಷ್ಟು ಕಾರುಗಳ ದರಗಳಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ನವೆಂಬರ್ ತಿಂಗಳಲ್ಲಿ ಘೋಷಿಸಿದ ಫೋರ್ಡ್ ಐಕಾನ್ ದರದಲ್ಲಿ ಶೇ.1.5 ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ಫೋರ್ಡ್ ಇಂಡಿಯಾ( ಮಾರುಕಟ್ಟೆ, ಮಾರಾಟ ಮತ್ತು ಸೇವೆ) ವಿಭಾಗದ ಕಾರ್ಯಕಾರಿ ನಿರ್ದೇಶಕ ನೈಗಲ್ ವರ್ಕ್ ಹೇಳಿದ್ದಾರೆ.
ಕಳೆದ ಮೂರು ತಿಂಗಳಿನಿಂದ ರೂಪಾಯಿ ಮೌಲ್ಯ ಡಾಲರ್ ಎದುರಿಗೆ ನಿರಂತರ ಕುಸಿತ ಕಾಣುತ್ತಿದ್ದು, ನಿನ್ನೆಯ ವಹಿವಾಟಿನಲ್ಲಿ ಡಾಲರ್‌ಗೆ 50.70 ರೂಪಾಯಿಗಳಿಗೆ ತಲುಪಿತ್ತು. ರೂಪಾಯಿ ಮೌಲ್ಯದ ಕುಸಿತದಿಂದಾಗಿ ಕಾರುಗಳ ದರ ಏರಿಕೆ ಅನಿವಾರ್ಯವಾಗಿದ್ದು ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ರೂಪಾಯಿ ಮೌಲ್ಯ ಕುಸಿತದಿಂದಾಗಿ ಕಾರು ತಯಾರಿಕೆ ಕಚ್ಚಾ ವಸ್ತುಗಳ ದರಗಳಲ್ಲಿ ಏರಿಕೆಯಾಗುತ್ತಿವೆ.ಆದ್ದರಿಂದ ಕಾರುಗಳ ದರಗಳಲ್ಲಿ ಏರಿಕೆ ಮಾಡಲಾಗುತ್ತಿದೆ ಎಂದು ಫೋರ್ಡ್ ಮೂಲಗಳು ತಿಳಿಸಿವೆ.
ಫೋರ್ಡ್ ಇಂಡಿಯಾ ಐಕಾನ್ ಕಳೆದ ನವೆಂಬರ್‌ನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಪೆಟ್ರೋಲ್ ಕಾರಿನ ದರವನ್ನು 5.19 ಲಕ್ಷ ಹಾಗೂ ಡೀಸೆಲ್ ಕಾರಿನ ದರವನ್ನು 4.59 ಲಕ್ಷ ರೂ.ಗಳಿಗೆ ನಿಗದಿಪಡಿಸಿದೆ. |