ಸತ್ಯಂ ಕಂಪ್ಯೂಟರ್ ಸಂಸ್ಥೆಗೆ 7800 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತಿರುವ ಸಂಸ್ಥಾಪಕ ಬಿ.ರಾಮಾಲಿಂಗಾರಾಜು ಹಾಗೂ ಇತರ ಇಬ್ಬರು ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿಗಳಿಗೆ ಸಿಬಿಐ ಸಲ್ಲಿಸಿದ ಮನವಿಯಲ್ಲಿ ರಾಮಲಿಂಗಾರಾಜು ಹಾಗೂ ಆತನ ಸಹೋದರ ಮಾಜಿ ಸತ್ಯಂ ವ್ಯವಸ್ಥಾಪಕ ರಾಮಾರಾಜು ಮತ್ತು ಮಾಜಿ ಆರ್ಥಿಕ ವಿಭಾಗದ ಅಧಿಕಾರಿ ವಡ್ಲಾಮನಿ ಶ್ರೀನಿವಾಸ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಕೋರಿದೆ.
ಆರೋಪಿ ಪರ ವಕೀಲರು ಮೂರು ದಿನಗಳ ಕಾಲವಕಾಶ ಕೇಳಿದ್ದರಿಂದ ನ್ಯಾಯಾಲಯ ಶನಿವಾರದಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ. ಇದೇ ವೇಳೆ ರಾಮಲಿಂಗಾರಾಜು ಸಹೋದರರ ಜಾಮೀನು ಅರ್ಜಿಯನ್ನು ಮಾರ್ಚ್ 28 ಕ್ಕೆ ಮುಂದೂಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ. |