ಮುಂಬೈ: ಏಷ್ಯಾ ಶೇರುಪೇಟೆಗಳ ಮಿಶ್ರ ಫಲಿತಾಂಶದಿಂದಾಗಿ ದೇಶಿಯ ಮಾರುಕಟ್ಟೆ ಕುಸಿತ ಕಾಣಲಿದೆ ಎನ್ನುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 28 ಪೈಸೆ ಕುಸಿತ ಕಂಡಿದೆ.
ಏಷ್ಯಾ ರಾಷ್ಟ್ರಗಳ ಕರೆನ್ಸಿಗಳಿಗಿಂತ ಡಾಲರ್ ಮೌಲ್ಯ ಏರಿಕೆಯಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 50.98 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ 28 ಪೈಸೆ ಕುಸಿತ ಕಂಡಿದ್ದರಿಂದ 50.70/71 ರೂ.ಗಳಿಗೆ ತಲುಪಿದೆ.
ಮಾಸಾಂತ್ಯದಿಂದಾಗಿ ಅಮುದುದಾರರು ಹಾಗೂ ತೈಲ ಸಂಸ್ಥೆಗಳಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ಜಪಾನ್‌ನ ನಿಕೈ ಹಾಗೂ ಚೀನಾದ ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಶೇ. 1ರಷ್ಟು ಇಳಿಕೆ ಕಂಡಿದೆ. |