ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎರಡು ಲಕ್ಷ ರೂ. ಸೈಕಲ್ ಮಾರುಕಟ್ಟೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಡು ಲಕ್ಷ ರೂ. ಸೈಕಲ್ ಮಾರುಕಟ್ಟೆಗೆ
ಈಗಷ್ಟೇ ಒಂದು ಲಕ್ಷ ರುಪಾಯಿಗಳ ನ್ಯಾನೋ ಕಾರು ಹವಾ ಸೃಷ್ಟಿಸಿಬಿಟ್ಟರೆ, ಇನ್ನೊಂದೆಡೆ ಮುರುಗಪ್ಪ ಗ್ರೂಪ್ ಸಂಸ್ಥೆ ಎರಡು ಲಕ್ಷ ರುಪಾಯಿಗಳ ಸೈಕಲ್ ಬಿಡುಗಡೆ ಮಾಡಿದೆ! ಲಕ್ಷಗಟ್ಟಲೆ ಸಾಮಾನ್ಯ ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸನ್ನು ನನಸು ಮಾಡಲು ಒಂದು ಲಕ್ಷ ರುಪಾಯಿಗಳ ಕಾರು ಬಿಡುಗಡೆಯಾದರೆ, ಶ್ರೀಮಂತರ ವರ್ಗದ ಸೈಕ್ಲಿಂಗ್ ಕನಸನ್ನು ಮುರುಗಪ್ಪ ಗ್ರೂಪ್ ಈಡೇರಿಸಲಿದೆ.

ಮುರುಗಪ್ಪ ಗ್ರೂಪ್ ಸೈಕಲ್‌ಗಳ ಪ್ರೀಮಿಯಂ ಸರಣಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 20 ಸಾವಿರ ರುಪಾಯಿಗಳಿಂದ 2 ಲಕ್ಷ ರುಪಾಯಿಗಳವರೆಗಿನ ಸೈಕಲ್‌ಗಳಿವೆ. ಜಗತ್ತಿನ ಪ್ರಮುಖ ಸೈಕಲ್ ಕಂಪನಿಗಳಾದ ಬಿಯಾಂಚಿ, ಕ್ಯಾನೋನ್ಡೇಲ್ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿರುವ ಮುರುಗಪ್ಪ ಗ್ರೂಪ್ ಈ ಸೈಕಲ್ ಸರಣಿ ಬಿಡುಗಡೆಗೊಳಿಸಿದೆ.
ಈ ಸೈಕಲ್‌ನಲ್ಲಿ ಉಳಿದ ಸೈಕಲ್‌ಗಳಿಗಿಂತ ಭಿನ್ನವಾದ ಆಧುನಿಕ ಸೌಕರ್ಯಗಳಿವೆ. ಟ್ಯೂಬ್ ಇಲ್ಲದ ಚಕ್ರಗಳನ್ನು ಹೊಂದಿರುವ ಶಾಕ್ ಎಬ್ಸಾರ್ಬರ್‌ಗಳನ್ನು ಹಾಗೂ ಗೇರ್‌ಗಳನ್ನು ಹೊಂದಿದೆ.

ಭಾರತದಲ್ಲಿ ಸೈಕಲ್ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದು, ಸಾಂಪ್ರದಾಯಿಕ ಸೈಕಲ್ 1,700 ರೂಪಾಯಿಗಳಿಂದ 2,000 ರೂಪಾಯಿಗಳಿಗೆ ಲಭ್ಯವಿವೆ. ಗ್ರಾಮೀಣ ಜನರು ಹಾಗೂ ನಗರದ ಬಡವರ್ಗದವರು ಹಿಂದೆ ಸೈಕಲ್ ಬಳಕೆ ಮಾಡುತ್ತಿದ್ದು, ಈಗ ದ್ವಿಚಕ್ರ ವಾಹನಗಳನ್ನು ಕೊಳ್ಳಲು ಆರಂಭಿಸಿರುವುದರಿಂದ ಶೇ.75ರಷ್ಟಿದ್ದ ಸೈಕಲ್ ಮಾರಾಟ ಈಗ ಶೇ.50ಕ್ಕಿಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿಯಮ ಉಲ್ಲಂಘನೆ: ಸಹಕಾರಿ ಬ್ಯಾಂಕ್‌ಗೆ ದಂಡ
ಟೊಯೊಟಾದಿಂದ 'ಎಕ್ಸ್‌ಪ್ರೆಸ್ ಮೆಂಟನನ್ಸ್ ಸರ್ವಿಸ್'
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಜಿಡಿಪಿ ದರ ಶೇ.6.5 ರಷ್ಟಾಗಲಿದೆ:ಮೊಂಟೆಕ್
ಸತ್ಯಂ ಬಿಡ್‌ನಿಂದ ಸ್ಪೈಸ್ ಹಿಂದಕ್ಕೆ?
ರಾಜುಗೆ ಮಂಪರು ಪರೀಕ್ಷೆ:ನ್ಯಾಯಾಲಯಕ್ಕೆ ಸಿಬಿಐ ಮನವಿ