ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2011ಕ್ಕೆ ಸ್ಕೋಡಾದ ಪುಟ್ಟ ಕಾರು ಮಾರುಕಟ್ಟೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2011ಕ್ಕೆ ಸ್ಕೋಡಾದ ಪುಟ್ಟ ಕಾರು ಮಾರುಕಟ್ಟೆಗೆ
ವೋಕ್ಸ್ವೇಗನ್ ಗ್ರೂಪ್‌ನ ಸ್ಕೋಡಾ ಸಂಸ್ಥೆ ತನ್ನ ಆಧುನೀಕೃತ ಪುಟ್ಟ ಕಾರು ತಯಾರಿಸುತ್ತಿದ್ದು, 2011ರ ವೇಳೆಗೆ ಮಾರುಕಟ್ಟೆಗೆ ಬರಲಿದೆ.

ಸ್ಕೋಡಾ ಆಟೋ ಇಂಡಿಯಾ ಆಪರೇಷನ್ಸ್‌ನ ಮುಖ್ಯಸ್ಥ ಥಾಮಸ್ ಕ್ಯುಯೆಲ್ ಹೇಳುವಂತೆ, ಗ್ಯಾಸ್ ಬಳಸಿ ಓಡಿಸುವ ಕಾರು ಇದಾಗಿದ್ದು, ಪುಟ್ಟದಾಗಿರುತ್ತದೆ. ಎರಡು ಕಾರುಗಳು ಬಿಡುಗಡೆ ಮಾಡಲಿದ್ದು ಒಂದು ಸ್ಕೋಡಾದಿಂದ ಹಾಗೂ ಇನ್ನೊಂದು ವೋಕ್ಸ್‌ವೇಗನ್ ಸಂಸ್ಥೆಯಿಂದ ಈ ಕಾರು ಬಿಡುಗಡೆಗೊಳ್ಳಲಿದೆ. ಕಾರು ಆಧುನೀಕರಣದ ವಿನ್ಯಾಸ ಯೋಜನೆ ನಡೆಯುತ್ತಿದ್ದು, ಇನ್ನು 24-30 ತಿಂಗಳಲ್ಲಿ ಬಿಡುಗಡೆ ಸಾಧ್ಯವಿದೆ ಎಂದರು.

ಸ್ಕೋಡಾದಿಂದ ಬಿಡುಗಡೆಯಾಗಲಿರುವ ಪುಟ್ಟ ಕಾರು ಈ ಮೊದಲಿನ ಫ್ಯಾಬಿಯಾ (ನಾಲ್ಕು ಲಕ್ಷ ರೂ.) ಕಾರಿಗಿಂತಲೂ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಆದರೆ, ವೋಕ್ಸ್‌ವೇಗನ್‌ನ ಪುಟ್ಟ ಕಾರು ಸುಮಾರು ಏಳು ಲಕ್ಷ ರೂಪಾಯಿಗಳ ಅಂದಾಜು ಇರಬಹುದು ಎಂದರು. ಸ್ಕೋಡಾ ತನ್ನ ಕಾರುಗಳಾದ ಫ್ಯಾಬಿಯಾ, ಲಾರಾ, ಸೂಪರ್ಬ್, ಆಕ್ಟೇವಿಯಾಗಳಿಗೆ ಬಿಡಿಭಾಗಗಳನ್ನು ಯುರೋಪ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದು, ಹೊಸ ಕಾರಿಗೂ ಯುರೋಪ್‌ನಿಂದಲೇ ಆಮದು ಮಾಡಿಕೊಳ್ಳಲಿದೆ.

ವಿಶ್ವದ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾದ ನ್ಯಾನೋ ಬಿಡುಗಡೆಯಿಂದ ವಿಶ್ವದ ಎಲ್ಲ ಕಾರು ತಯಾರಿಕಾ ಸಂಸ್ಥಎಗಳ ಜವಾಬ್ದಾರಿ ಹೆಚ್ಚಿದ್ದು, ಗ್ರಾಹಕರಿಗೆ ತಮ್ಮ ಬೆಲೆಗೆ ಸರಿಯಾದ ವಸ್ತುಗಳ್ನನು ಪೂರೈಸಬೇಕಾದ ಜವಾಬ್ದಾರಿಯೂ ಸೇರಿಕೊಂಡಿದೆ ಎಂದು ಥಾಮಸ್ ಹೇಳಿದರು.

ನ್ಯಾನೋ- ಮೇನಿಯಾ ಸ್ವಲ್ಪ ಸಮಯದ ನಂತರ ಇಳಿದ ಮೇಲೆ ಹಾಗೂ ಆ ಕಾರು ತಳವೂರಿದ ಮೇಲೆ, ವಾಹನ ತಯಾರಿಕಾ ಸಂಸ್ಥೆಗಳು ಹೊಸ ಪ್ರಯೋಗಕ್ಕೆ ಇಳಿಯಲೇ ಬೇಕಾಗಿದೆ. ನ್ಯಾನೋ ಬಹಳ ಯುರೋಪಿಯನ್ ಹಾಗೂ ಅಮೆರಿಕನ್ ಕಾರು ತಯಾರಿಕಾ ಸಂಸ್ಥೆಗಳ ಸ್ಪರ್ಧೆಯನ್ನು ಹೆಚ್ಚಿಸಿರುವುದಲ್ಲದೆ, ಭಾರತಕ್ಕೆ ಎಂತಹ ಎಂಜಿನಿಯರಿಂಗ್ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟಿದೆ. ಸಾಧ್ಯವೇ ಇಲ್ಲವೆಂದು ಹೇಳಲಾಗುತ್ತಿದ್ದುದನ್ನು ಸಾಧ್ಯವಾಗಿಸಿದ ಸ್ಥಳೀಯ ಗುಂಪಿನ ಮಹತ್ತರ ಸಾಮರ್ಥ್ಯ ವಿಶ್ವದ ಕಾರು ತಯಾರಿಕಾ ಸಂಸ್ಥೆಗಳಿಗೇ ಸವಾಲು ಹಾಕಿದೆ ಎಂದರು.

ಸ್ಕೋಡಾ ತನ್ನ ಪುಟ್ಟ ಕಾರು ಬಿಡುಗಡೆಯ ಜತೆಗೆ ಸೆಡಾನ್ ಮಾದರಿಯ ಹೊಸ ಲಾರಾ ಬಿಡುಗಡೆಗೊಳಿಸಲಿದೆ. ಸ್ಪೋಟ್ಸ್ ಮಾದರಿಯ ಪರಿಸರ ಸ್ನೇಹಿ ಲಾರಾವನ್ನೂ ಸ್ಕೋಡಾ ಹಾಗೂ ಎಸ್ಟೇಟ್ ಮಾದರಿಯ ಫ್ಯಾಬಿಯಾವನ್ನೂ ನಂತರ ಹೊರಡಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎರಡು ಲಕ್ಷ ರೂ. ಸೈಕಲ್ ಮಾರುಕಟ್ಟೆಗೆ
ನಿಯಮ ಉಲ್ಲಂಘನೆ: ಸಹಕಾರಿ ಬ್ಯಾಂಕ್‌ಗೆ ದಂಡ
ಟೊಯೊಟಾದಿಂದ 'ಎಕ್ಸ್‌ಪ್ರೆಸ್ ಮೆಂಟನನ್ಸ್ ಸರ್ವಿಸ್'
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಜಿಡಿಪಿ ದರ ಶೇ.6.5 ರಷ್ಟಾಗಲಿದೆ:ಮೊಂಟೆಕ್
ಸತ್ಯಂ ಬಿಡ್‌ನಿಂದ ಸ್ಪೈಸ್ ಹಿಂದಕ್ಕೆ?