ಪರಸ್ಪರ ದೇಶಗಳು ಆತ್ಮಿಯ ರಾಷ್ಟ್ರ ಸ್ಥಾನಮಾನ ನೀಡುವುದರೊಂದಿಗೆ ಹೂಡಿಕೆಯನ್ನು ಹೆಚ್ಚಿಸುವ ಕುರಿತಂತೆ ಭಾರತ ಮತ್ತು ಲಿಬಿಯಾ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ.
ಬೈಲ್ಯಾಟ್ರಲ್ ಇನ್‌ವೆಸ್ಟ್‌ಮೆಂಟ್ ಪ್ರಮೋಷನ್ ಆಂಡ್ ಪ್ರೋಟಕ್ಷನ್ ಎಗ್ರಿಮೆಂಟ್ (BIPA) ಒಪ್ಪಂದಕ್ಕೆ ಸಹಿ ಹಾಕುವದರೊಂದಿಗೆ ಉಭಯ ದೇಶಗಳ ಭಾಂದವ್ಯಕ್ಕೆ ಹೊಸ ನಾಂದಿ ಹಾಡಿದಂತಾಗಿದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ ಉಭಯ ದೇಶಗಳು ಹೂಡಿಕೆದಾರರಿಗೆ ಉತ್ತೇಜನ ನೀಡಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ಕಾನೂನಿನ ಪ್ರಕಾರ ಅವಕಾಶ ನೀಡಬೇಕು ಎನ್ನುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ದೇಶಗಳು ಹೂಡಿಕೆದಾರರಿಗೆ ಆತ್ಮಿಯ ಮಿತ್ರ ರಾಷ್ಟ್ರದ ಸ್ಥಾನಮಾನ ನೀಡಿ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡಬಹುದಾಗಿದೆ. |