ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇ.0.27ಕ್ಕೆ ಇಳಿಕೆ ಕಂಡ ಹಣದುಬ್ಬರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.0.27ಕ್ಕೆ ಇಳಿಕೆ ಕಂಡ ಹಣದುಬ್ಬರ
PTI
ಅಗತ್ಯ ದಿನಸಿವಸ್ತುಗಳಾದ ಅಹಾರ ಧಾನ್ಯ ಹಾಗೂ ತರಕಾರಿ ದರಗಳಲ್ಲಿ ಏರಿಕೆಯಾಗಿದ್ದರೂ ಮಾರ್ಚ್14ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ.0.27ಕ್ಕೆ ಇಳಿಕೆಯಾಗಿ ಹಣದುಬ್ಬರ ಕುಸಿತವನ್ನು ಎದುರಿಸುತ್ತಿದೆ.

ಕಳೆದ ವಾರ ಶೇ.0.44 ರಷ್ಟಿದ್ದ ಹಣದುಬ್ಬರ ಪ್ರಸಕ್ತ ವಾರದಲ್ಲಿ ಶೇ.0.27ಕ್ಕೆ ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಣದುಬ್ಬರ ಇಳಿಕೆ ಗಮನಾರ್ಹವಾಗಿದ್ದರೂ ಗ್ರಾಹಕ ವಸ್ತುಗಳಾದ ಅಹಾರಧಾನ್ಯ, ತರಕಾರಿ ದರಗಳಿಗೆ ಸಂಬಂಧಿಸಿದ ಗ್ರಾಹಕ ಸೂಚ್ಯಂಕ ದರದಲ್ಲಿ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಅಸಮಧಾನ ಮೂಡಲು ಕಾರಣವಾಗಿದೆ.

ಪ್ರಸಕ್ತ ವಾರದಲ್ಲಿ ಅಹಾರ ಧಾನ್ಯಗಳು 245.5 ರಿಂದ 245.6ಕ್ಕೆ ಏರಿಕೆಯಾಗಿದೆ. ಬಾರ್ಲಿ, ಬಾಜ್ರಾ, ಮೈದಾ, ಹಣ್ಣು, ತರಕಾರಿ ದ್ವಿದಳ ಧಾನ್ಯಗಳು ಭತ್ತದ ದರಗಳಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದೆ.ಆದರೆ ಮೀನು ಮತ್ತು ಟೀ(ಶೇ.3ರಷ್ಟು) ತೊಗರಿ ಬೆಳೆ ಶೇ.2ರಷ್ಟು ಮಸಾಲೆ ಪದಾರ್ಥಗಳ ದರಗಳು ಶೇ.1 ರಷ್ಟು ಇಳಿಕೆ ಕಂಡಿವೆ.

ಉತ್ಪಾದಕ ವಸ್ತುಗಳ ಸೂಚ್ಯಂಕ ಶೇ.2 ರಷ್ಟು ಏರಿಕೆ ಕಂಡಿದ್ದರೇ ಜವಳಿ ಸೂಚ್ಯಂಕ ಶೇ.0.9 ರಷ್ಟು ಇಳಿಕೆ ಕಂಡಿದೆ.

ಕಳೆದ ಜೂನ್ ತಿಂಗಳಲ್ಲಿ ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ದರಗಳಲ್ಲಿ ಏರಿಕೆ ಮಾಡಿದ್ದರಿಂದ ಹಣದುಬ್ಬರ ಎರಡಂಕಿಗೆ ತಲುಪಿತ್ತು.ತೈಲ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿ ಹಣದುಬ್ಬರ ಕುಸಿತದತ್ತ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ತಜ್ಞರ ಪ್ರಕಾರ ಹಣದುಬ್ಬರ ಮಾಸಾಂತ್ಯದ ವೇಳೆಗೆ ಶೂನ್ಯಕ್ಕಿಂತ ಕೆಳಗಿಳಿಯಲಿದ್ದು, ಮುಂದಿನ ನಾಲ್ಕು ತಿಂಗಳುಗಳವರೆಗೆ ಶೂನ್ಯಕ್ಕಿಂತ ಕೆಳಮಟ್ಟದಲ್ಲಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೂಡಿಕೆ: ಭಾರತ-ಲಿಬಿಯಾ ದ್ವಿಪಕ್ಷೀಯ ಒಪ್ಪಂದ
2011ಕ್ಕೆ ಸ್ಕೋಡಾದ ಪುಟ್ಟ ಕಾರು ಮಾರುಕಟ್ಟೆಗೆ
ಎರಡು ಲಕ್ಷ ರೂ. ಸೈಕಲ್ ಮಾರುಕಟ್ಟೆಗೆ
ನಿಯಮ ಉಲ್ಲಂಘನೆ: ಸಹಕಾರಿ ಬ್ಯಾಂಕ್‌ಗೆ ದಂಡ
ಟೊಯೊಟಾದಿಂದ 'ಎಕ್ಸ್‌ಪ್ರೆಸ್ ಮೆಂಟನನ್ಸ್ ಸರ್ವಿಸ್'
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ