ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿ-20 ರಾಷ್ಟ್ರಗಳಲ್ಲಿ ಒಮ್ಮತವಿದೆ: ಬ್ರೌನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿ-20 ರಾಷ್ಟ್ರಗಳಲ್ಲಿ ಒಮ್ಮತವಿದೆ: ಬ್ರೌನ್
ಆರ್ಥಿಕ ಉತ್ತೇಜನ ಯೋಜನೆ ಜಾರಿಗೊಳಿಸುವ ಕುರಿತಂತೆ ಜಿ-20 ರಾಷ್ಟ್ರಗಳಲ್ಲಿ ಭಿನ್ನಮತ ತಲೆದೋರಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಇಂಗ್ಲೆಂಡ್ ಪ್ರಧಾನಿ ಗೋರ್ಡಾನ್ ಬ್ರೌನ್ , ಏಪ್ರಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಾಲ್‌ಸ್ಟ್ರೀಟ್‌ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬ್ರೌನ್, ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಉತ್ತೇಜನ ಪ್ಯಾಕೇಜ್‌ಗಳನ್ನು ಆಯಾ ಸರಕಾರಗಳು ಜಾರಿಗೆ ತರುವಂತೆ ಸಲಹೆ ನೀಡಲಾಗುವುದೇ ಹೊರತು ಒತ್ತಡ ಹೇರುತ್ತಿಲ್ಲವೆಂದು ಸ್ಪಷ್ಟಪಡಿಸಿದರು.

ಜಿ-20 ಶೃಂಗಸಭೆಗೆ ಆಗಮಿಸುವ ನಾಯಕರಿಗೆ ಮುಂದಿನ ವರ್ಷದ ನಿಮ್ಮ ಬಜೆಟ್‌ ಬಗ್ಗೆ ವಿವರಣೆ ನೀಡಿ ಎಂದು ಯಾರು ಕೇಳುತ್ತಿಲ್ಲ. ಪ್ರತಿಯೊಂದು ರಾಷ್ಟ್ರಕ್ಕೂ ತಮ್ಮದೇ ಆದ ನಿರ್ಧಾರ ಕೈಗೊಳ್ಳುವ ಹಕ್ಕಿದೆ ಎಂದರು.

ಜಾಗತಿಕ ಆರ್ಥಿಕ ಕುಸಿತವನ್ನು ತಡೆಯುವುದು ಜಿ-20 ರಾಷ್ಟ್ರಗಳ ಉದ್ದೇಶವಾಗಿದೆ. ವಿಶ್ವದ ಪ್ರತಿಯೊಂದು ರಾಷ್ಟ್ರಗಳು ಆರ್ಥಿಕ ಕುಸಿತಕ್ಕೆ ಬಲಿಯಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುವದನ್ನು ತಡೆಯಲು ಸೂಕ್ತ ಆರ್ಥಿಕ ನೀತಿಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ ಎಂದು ಪ್ರದಾನಿ ಗೋರ್ಡಾನ್ ಬ್ರೌನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಿ20, ಭಾರತ, ಬ್ರೌನ್, ಶೃಂಗಸಭೆ
ಮತ್ತಷ್ಟು
ನ್ಯಾನೋ ಅಲ್ಪ ಪ್ರಬಾವ ಬೀರಲಿದೆ:ಮಾರುತಿ ಸುಝುಕಿ
ಶೇ.0.27ಕ್ಕೆ ಇಳಿಕೆ ಕಂಡ ಹಣದುಬ್ಬರ
ಹೂಡಿಕೆ: ಭಾರತ-ಲಿಬಿಯಾ ದ್ವಿಪಕ್ಷೀಯ ಒಪ್ಪಂದ
2011ಕ್ಕೆ ಸ್ಕೋಡಾದ ಪುಟ್ಟ ಕಾರು ಮಾರುಕಟ್ಟೆಗೆ
ಎರಡು ಲಕ್ಷ ರೂ. ಸೈಕಲ್ ಮಾರುಕಟ್ಟೆಗೆ
ನಿಯಮ ಉಲ್ಲಂಘನೆ: ಸಹಕಾರಿ ಬ್ಯಾಂಕ್‌ಗೆ ದಂಡ