ಟಾಟಾ ಮೋಟಾರ್ಸ್‌ನ ನ್ಯಾನೋ ಕಾರು ಬಿಡುಗಡೆಯಾದ ನಂತರ ಜನರಲ್ ಮೋಟಾರ್ಸ್ ಕೂಡಾ ವರ್ಷಾಂತ್ಯದ ವೇಳೆಗೆ "ಮಿನಿ ಕಾರು "ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೆ ನೀಡಿದೆ.
ಟಾಟಾರವರ ನ್ಯಾನೋ ಕಾರಿಗೂ ಜನರಲ್ ಮೋಟಾರ್ಸ್‌ನ ಮಿನಿ ಕಾರಿಗೂ ಯಾವುದೇ ರೀತಿಯ ಹೋಲಿಕೆಯಿಲ್ಲ. ವಾಹನೋದ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಭಾರತದ ಮಾರುಕಟ್ಟೆಗೆ ತರುವ ಪ್ರಯತ್ನವನ್ನು ಜನರಲ್ ಮೋಟಾರ್ಸ್ ಮಾಡುತ್ತಿದೆ ಎಂದು ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲಿಮ್ ಹೇಳಿದ್ದಾರೆ.
ವಡೋದರಾದಿಂದ 45 ಕಿ.ಮಿ. ದೂರದಲ್ಲಿರುವ ಹಾಲೋಲ್‌ನ ಜನರಲ್ ಮೋಟಾರ್ಸ್ ಘಟಕದಲ್ಲಿ ಏಜೆನ್ಸಿದಾರರೊಂದಿಗೆ ಮಾತನಾಡಿದ ಸ್ಲಿಮ್ ಮಿನಿ ಕಾರಿನ ದರವನ್ನು ಬಹಿರಂಗಪಡಿಸಲು ನಿರಾಕರಿಸಿದರು.
ಗುಜರಾತ್‌ನ ಹಾಲೋಲ್ ಹಾಗೂ ಮಹಾರಾಷ್ಟ್ರದಲ್ಲಿರುವ ತಲೇಗಾಂವ್ ವಾಹನೋದ್ಯಮ ಘಟಕಗಳು ವಾರ್ಷಿಕವಾಗಿ 85 ಸಾವಿರ ಶೆರ್ವಾಲೆಟ್ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಳೆದ 2008ರಲ್ಲಿ ಕೇವಲ 65,702 ಕಾರುಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಜನರಲ್ ಮೋಟಾರ್ಸ್ ಕಂಪೆನಿ ಪ್ರಸಕ್ತ ವರ್ಷದಲ್ಲಿ ಸಿಎನ್‌ಜಿ, ಎಲ್‌ಪಿಜಿ ಮತ್ತು ಮಿನಿ ಕಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ವ್ಯವಸ್ಥಾಪಕ ಕಾರ್ಲಾ ಸ್ಲಿಮ್ ತಿಳಿಸಿದ್ದಾರೆ. |