ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ ರಾಜ್ಯದಲ್ಲಿ 3ಜಿ ಸೇವೆಯನ್ನು ಆರಂಭಿಸಿದ್ದು, ಮಲ್ಟಿ ಮೀಡಿಯಾ ಮತ್ತು ಹೈಸ್ಪೀಡ್ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸಲಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ. 3 ಜಿ ಸೇವೆಯಿಂದಾಗಿ ಮಲ್ಟಿ ಮೀಡಿಯಾ ಮತ್ತು ಹೈಸ್ಪೀಡ್ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆ ದೊರೆಯುವುದಲ್ಲದೇ ಮೊಬೈಲ್‌ನಲ್ಲಿ ವಿಡಿಯೋ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಒರಿಸ್ಸಾ ರಾಜ್ಯದ ಬಿಎಸ್‌ಎನ್‌ಎಲ್‌ನ ಮುಖ್ಯ ವ್ಯವಸ್ಥಾಪಕ ಎ.ಎನ್.ರಾಯ್ ತಿಳಿಸಿದ್ದಾರೆ. 3 ಜಿ ಮೊಬೈಲ್ ಫೋನ್‌ನಿಂದಾಗಿ 2ಜಿ ನೆಟ್‌ವರ್ಕ್ ಪಡೆದು ವಿಡಿಯೋ ಕರೆಗಳನ್ನು ಮಾಡಬಹುದಾಗಿದೆ. ಟಿವಿ ವೀಕ್ಷಣೆ, ಹೈ ಸ್ಪೀಡ್ ಇಂಟರ್‌ನೆಟ್, ಇ-ಮೇಲ್ ಮತ್ತು ಮ್ಯೂಜಿಕ್ ಡೌನ್‌ಲೋಡ್ ಮಾಡಬಹುದಾಗಿದೆ ಎಂದು ಹೇಳಿದ್ದಾರೆ. ಒರಿಸ್ಸಾ ಕೂಡಾ ಜಾಗತಿಕ 3ಜಿ ನೆಟ್‌ವರ್ಕ್‌ನ ಭಾಗವಾಗಿರುವುದು ತುಂಬಾ ಸಂತೋಷವಾಗಿದೆ. ರಾಜ್ಯದ 30 ಜಿಲ್ಲೆಗಳು ಹಾಗೂ ಔದ್ಯೋಗಿಕ ಮತ್ತು ವಾಣಿಜ್ಯ ಖ್ಯಾತಿಯ 18 ನಗರಗಳಲ್ಲಿ 3ಜಿ ಸೇವೆ ವಿಸ್ತರಿಸಲಾಗುವುದು ಎಂದು ರಾಯ್ ಹೇಳಿದ್ದಾರೆ. |