ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೀಘ್ರದಲ್ಲಿ ದರ ಇಳಿಕೆ ಸಾಧ್ಯತೆ :ವೀರಮಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರದಲ್ಲಿ ದರ ಇಳಿಕೆ ಸಾಧ್ಯತೆ :ವೀರಮಣಿ
ಹಣದುಬ್ಬರ ಆಧಾರಿತ ಏರಿಕೆಯಾದ ದರಗಳು ಶೀಘ್ರದಲ್ಲಿ ಇಳಿಕೆಯಾಗಲಿವೆ ಎಂದು ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ವೀರಮಣಿ ಹೇಳಿದ್ದಾರೆ.

ಗ್ರಾಹಕ ಸೂಚ್ಯಂಕ ದರದಲ್ಲಿ ಇಳಿಕೆಯಾಗಲಿದೆ. ಆದರೆ ಸಗಟು ಸೂಚ್ಯಂಕ ದರ ಇಳಿಕೆಯಾದಷ್ಟು ದರಗಳು ಇಳಿಕೆಯಾಗುತ್ತವೆ ಎಂದು ನಿರೀಕ್ಷಿಸಿಲ್ಲ ಎಂದು ವೀರಮಣಿ ತಿಳಿಸಿದ್ದಾರೆ.

ಕೈಗರಿಕೋದ್ಯಮದ ಅಭಿವೃದ್ದಿ ದುರ್ಬಲಗೊಂಡಿದ್ದು, ಹಣದುಬ್ಬರ ಕುಸಿತದತ್ತ ಸಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನುಡಿದರು.

ಮಾರ್ಚ್ 7ಕ್ಕೆ ವಾರಂತ್ಯಗೊಂಡಂತೆ ಮೂರು ದಶಕಗಳಷ್ಟು ಇಳಿಕೆಯಾದ ಹಣದುಬ್ಬರ ಶೇ.0.44ಕ್ಕೆ ತಲುಪಿದ್ದು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಆರ್ಥಿಕ ಅಭಿವೃದ್ಧಿ ದರದ ಕುರಿತಂತೆ ಮಾತನಾಡಿ,ದೇಶದ ಜಿಡಿಪಿ ದರ ಶೇ.7.1 ರ ಗಡಿಯನ್ನು ತಲುಪುವ ಸಾಧ್ಯತೆಗಳಿದ್ದು, ಕೃಷಿಯ ಮೇಲೆ ಅವಲಂಬಿತವಾಗಿದೆ ಎಂದು ವೀರಮಣಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದರ ಇಳಿಕೆ, ವೀರಮಣಿ
ಮತ್ತಷ್ಟು
ಒರಿಸ್ಸಾದಲ್ಲಿ 3ಜಿ ಸೇವೆ ಆರಂಭ:ಬಿಎಸ್‌ಎನ್‌ಎಲ್
ಜಿಎಂನಿಂದ ವರ್ಷಾಂತ್ಯಕ್ಕೆ "ಮಿನಿ ಕಾರು "ಮಾರುಕಟ್ಟೆಗೆ
ಜಿ-20 ರಾಷ್ಟ್ರಗಳಲ್ಲಿ ಒಮ್ಮತವಿದೆ: ಬ್ರೌನ್
ನ್ಯಾನೋ ಅಲ್ಪ ಪ್ರಬಾವ ಬೀರಲಿದೆ:ಮಾರುತಿ ಸುಝುಕಿ
ಶೇ.0.27ಕ್ಕೆ ಇಳಿಕೆ ಕಂಡ ಹಣದುಬ್ಬರ
ಹೂಡಿಕೆ: ಭಾರತ-ಲಿಬಿಯಾ ದ್ವಿಪಕ್ಷೀಯ ಒಪ್ಪಂದ