ಮುಂಬೈ : ಏಷ್ಯಾ ಶೇರುಪೇಟೆಗಳ ಚೇತರಿಕೆಯಿಂದಾಗಿ ದೇಶಿಯ ಶೇರುಪೇಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಒಳಹರಿವು ಹೆಚ್ಚಳವಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 10 ಪೈಸೆ ಏರಿಕೆ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 50.63 ರೂಪಾಯಿಗಲಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 10 ಪೈಸೆ ಏರಿಕೆಯಾಗಿ 50.73/75.ರೂ.ಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಸ್ಥಿರತೆ ಕಂಡಿದ್ದರಿಂದ ದೇಶಿಯ ಶೇರುಪೇಟೆಯಲ್ಲಿ ನೇರ ವಿದೇಶ ಬಂಡವಾಳ ಹೂಡಿಕೆ ಹೆಚ್ಚಳವಾಗುವ ಸಾಧ್ಯತೆಗಳಿಂದಾಗಿ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಪಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ ಆರಂಭಿಕ ವಹಿವಾಟಿನಲ್ಲಿ 28 ಪೈಸೆ ಕುಸಿತ ಕಂಡ ರೂಪಾಯಿ ವಹಿವಾಟಿನ ಅಂತ್ಯಕ್ಕೆ 3 ಪೈಸೆ ಏರಿಕೆಯಾಗಿ 50.73/75 ರೂಪಾಯಿಗಳಿಗೆ ತಲುಪಿತ್ತು. |