ಜಾಗತಿಕ ಆರ್ಥಿಕ ಕುಸಿತವಿದ್ದರೂ ಇನ್ನು ಮೂರರಿಂದ ಆರು ತಿಂಗಳೊಳಗೆ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಚೇತರಿಕೆ ಕಂಡುಬರಲಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಆಯೋಗದ ಅಧ್ಯಕ್ಷ ಸುರೇಶ್ ಡಿ. ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಹಲವು ಯೋಜನೆಗಳು ಹಾಗೂ ಉತ್ತೇಜಕ ಪ್ಯಾಕೇಜ್‌ಗಳ ಪರಿಣಾಮ ಕೆಲವು ತಿಂಗಳ ನಂತರ ಗೋಚರಿಸಲಿದ್ದು, ಇನ್ನು ಮೂರರಿಂದ ಆರು ತಿಂಗಳ ನಂತರ ಆರ್ಥಿಕ ಚೇತರಿಕೆ ಸ್ಪಷ್ಟವಾಗಿ ಕಾಣಲಿದೆ ಎಂದರು. ಶೇ.4.5ರಷ್ಟು ಕೃಷಿ ಕ್ಷೇತ್ರದಲ್ಲಿ ಸುಧಾರಣೆಯಾಗಿದ್ದು, ಕೊಯ್ಲು ಕೂಡ ಈ ವರ್ಷ ಉತ್ತಮವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಮಟ್ಟದಿಂದ ಖರೀದಿಗೆ ಇದರಿಂದ ಯಾವುದೇ ಪರಿಣಾಮ ಬೀರದು. ಬ್ಯಾಂಕ್‌ಗಳಲ್ಲೂ ಹಣಕಾಸಿನ ಹರಿವು ಇನ್ನು ಉತ್ತಮಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ ಎಂದರು. |