ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಡ್ಡಿ ದರ ಇಳಿಕೆಯಾಗಲಿದೆಯೇ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಡ್ಡಿ ದರ ಇಳಿಕೆಯಾಗಲಿದೆಯೇ?
ಹಣದುಬ್ಬರ ಇಳಿಕೆಯಿಂದಾಗಿ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಗಳಿವೆಯೇ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳ ಮುಖ್ಯಸ್ಥರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಡಿ.ಸುಬ್ಬಾರಾವ್ ಮಾತನಾಡಿ, ರೆಪೊ, ರಿವರ್ಸ್ ರೆಪೊ ದರಗಳನ್ನು ಕಡಿತಗೊಳಿಸುವುದರಿಂದ ಬಡ್ಡಿದರ ಕಡಿತಗೊಳಿಸಿದಂತೆ ಎಂದು ಹೇಳಿದರು.

ಆದರೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್‌ನ ಮುಖ್ಯಸ್ಥ ಟಿ.ಎಸ್. ನಾರಾಯಣ ಸ್ವಾಮಿ ಶೀಘ್ರದಲ್ಲಿ ಬಡ್ಡಿ ದರ ಕಡಿತಗೊಳಿಸುವ ನಿರ್ಧಾರವಿಲ್ಲ. ಬ್ಯಾಂಕ್‌ಗಳು ಬಾಂಡ್‌ಗಳನ್ನು ಖರೀದಿಸಿ ಜೆ.ಸೆಕ್ಟರ್‌ನಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂದು ನುಡಿದರು.

ದೇಶದ ಎರಡನೇ ಬೃಹತ್ ಖಾಸಗಿ ಬ್ಯಾಂಕಾದ ಐಸಿಐಸಿಐ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಕಾಮತ್ ಮಾತನಾಡಿ ಮುಂಬರುವ ಕೆಲ ದಿನಗಳಲ್ಲಿ ಬಡ್ಡಿ ದರ ಕಡಿತಗೊಳಿಸುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಬಡ್ಡಿ ದರಗಳನ್ನು ಇಳಿಕೆ ಮಾಡುವುದು ಸಾಧ್ಯವಿಲ್ಲ. ಈಗಾಗಲೇ ಬ್ಯಾಂಕ್‌ಗಳು ಪ್ರೈಮ್ ಲೆಂಡಿಂಗ್ ದರಗಳು ಹಾಗೂ ಠೇವಣಿ ಬಡ್ಡಿ ದರಗಳನ್ನು ಪರಿಷ್ಕರಿಸಿದೆ ಎಂದು ನಾರಾಯಣ್ ಸ್ವಾಮಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕದ 5 ಸಾವಿರ ಉದ್ಯೋಗಿಗಳ ಕಡಿತ: ಐಬಿಎಂ
ನ್ಯಾನೋ: ದ್ವಿಚಕ್ರ ವಾಹನ ಮಾರಾಟಕ್ಕೆ ಹೊಡೆತ ಇಲ್ಲ
ಮೂರರಿಂದ ಆರು ತಿಂಗಳಲ್ಲಿ ಭಾರತದ ಆರ್ಥಿಕ ಚೇತರಿಕೆ
ಟಾಟಾ ಸ್ಕೈಗೆ 'ಐಎಸ್‌ಒ' ಪ್ರಮಾಣ ಪತ್ರ
ಐಬಿಎಮ್ ಉದ್ಯೋಗ ಕಡಿತ: ಭಾರತಕ್ಕೆ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ