ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೈರಸಿ ಡಿವಿಡಿಗಳನ್ನು ಖರೀದಿಸುವವರಿಗೆ ಜೈಲು ಶಿಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೈರಸಿ ಡಿವಿಡಿಗಳನ್ನು ಖರೀದಿಸುವವರಿಗೆ ಜೈಲು ಶಿಕ್ಷೆ
ಬಾಲಿವುಡ್‌ನಲ್ಲಿ ಬಿಡುಗಡೆಯಾದ ಚಿತ್ರಗಳ ಕೃತಿಚೌರ್ಯ ಸಿಡಿ ,ಡಿವಿಡಿಗಳನ್ನು ಖರೀದಿಸುವವರು, ಮಾರಾಟ ಮಾಡಿದವರು ಜೈಲಿಗೆ ತೆರಳಬೇಕಾಗುತ್ತದೆ. ಹೌದು. ರಾಷ್ಟ್ರಧ್ಯಕ್ಷೆ ಪ್ರತಿಭಾ ಪಾಟೀಲ್ ಮಹಾರಾಷ್ಟ್ರ ಸರಕಾರ ಸಲ್ಲಿಸಿದ ಅರ್ಜಿಗೆ ಸಹಿಹಾಕಿದ್ದಾರೆ.

ಮಹಾರಾಷ್ಟ್ರ ಸರಕಾರ ಕೇಂದ್ರ ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು, ನಕಲಿ ಸಿಡಿ ಮತ್ತು ಡಿವಿಡಿಗಳನ್ನು ಮಾರಾಟ ಮಾಡುವವರು ಅಥವಾ ಖರೀದಿಸುವವರು ಮಹಾರಾಷ್ಟ್ರ ಪ್ರೆವೆನ್ಶನ್ ಆಫ್ ಡೆಂಜರೀಯಸ್ ಆಕ್ಟಿವಿಟೀಸ್ ಕಾಯ್ದೆ ಅನ್ವಯ ಕನಿಷ್ಟ ಮೂರು ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ.

ಗೃಹ ಇಲಾಖೆಯ ಪ್ರಧಾನಿ ಕಾರ್ಯದರ್ಶಿ ಅನ್ನಾ ದಾನಿ ಮಾತನಾಡಿ, ವಿಧಾನಸಭೆಯಲ್ಲಿ ಮಸೂದೆಯನ್ನು ಮುಂಗಾರಿನಲ್ಲಿ ಅಥವಾ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು. ಕಾಯ್ದೆ ಜಾರಿಗೆ ಬಂದ ನಂತರ ನಕಲಿ ಸಿಡಿ,ಡಿವಿಡಿಗಳ ವಹಿವಾಟು ಕುಸಿಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ದೇಶದ ಹಿಂದಿ ಚಿತ್ರರಂಗ ವಾರ್ಷಿಕವಾಗಿ 5500 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದ್ದು,ಪೈರಸಿ ಹಾವಳಿಯಿಂದಾಗಿ ಶೇ.27 ರಷ್ಟು ನಷ್ಟ ಅನುಭವಿಸುತ್ತಿದೆ.ಬಾಲಿವುಡ್ ಚಿತ್ರರಂಗ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿ ಪೈರಸಿ ಬಾವಲಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿತ್ತು.

ನೂತನ ಕಾಯ್ದೆ ಜಾರಿಯಿಂದಾಗಿ ನಕಲಿ ಸಿಡಿ.ಡಿವಿಡಿಗಳ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವ ಭೂಗತ ಜಗತ್ತಿಗೆ ಭಾರಿ ಹಾನಿ ಸಂಭವಿಸಲಿದೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಡ್ಡಿ ದರ ಇಳಿಕೆಯಾಗಲಿದೆಯೇ?
ಅಮೆರಿಕದ 5 ಸಾವಿರ ಉದ್ಯೋಗಿಗಳ ಕಡಿತ: ಐಬಿಎಂ
ನ್ಯಾನೋ: ದ್ವಿಚಕ್ರ ವಾಹನ ಮಾರಾಟಕ್ಕೆ ಹೊಡೆತ ಇಲ್ಲ
ಮೂರರಿಂದ ಆರು ತಿಂಗಳಲ್ಲಿ ಭಾರತದ ಆರ್ಥಿಕ ಚೇತರಿಕೆ
ಟಾಟಾ ಸ್ಕೈಗೆ 'ಐಎಸ್‌ಒ' ಪ್ರಮಾಣ ಪತ್ರ
ಐಬಿಎಮ್ ಉದ್ಯೋಗ ಕಡಿತ: ಭಾರತಕ್ಕೆ ಲಾಭ