ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾರಿಂದ ಮತ್ತೊಂದು ಪ್ರಥಮ-ಆನ್‌ಲೈನ್ ಬುಕ್ಕಿಂಗ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾರಿಂದ ಮತ್ತೊಂದು ಪ್ರಥಮ-ಆನ್‌ಲೈನ್ ಬುಕ್ಕಿಂಗ್‌
ಮಧ್ಯಮ ವರ್ಗದವರ ಕನಸಾದ ಟಾಟಾ ಮೋಟಾರ್ಸ್‌ನ ನ್ಯಾನೋ ಕಾರು ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಆರಂಭಿಸಿರುವುದು ದೇಶದ ವಾಹನೋದ್ಯಮ ಕ್ಷೇತ್ರದಲ್ಲಿ ಪ್ರಥಮ ಬಾರಿಯಾಗಿದೆ.

ನ್ಯಾನೋ ಕಾರಿನ ಜೊತೆಗೆ ನ್ಯಾನೋ ಗಡಿಯಾರಗಳು, ಟೀ ಶರ್ಟ್‌, ಫೋನ್‌ಗಳು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ.ಟಾಟಾ ಮೋಟಾರ್ಸ್ ಕಾರು ಖರೀದಿ ಹಾಗೂ ಹಣ ಪಾವತಿ ಕುರಿತಂತೆ ಪ್ರತ್ಯೇಕ ವಿಭಾಗವನ್ನು ಆರಂಭಿಸಿದೆ.ಮುಂಬರುವ ಏಪ್ರಿಲ್ 9 ರಿಂದ ಎಪ್ರಿಲ್ 25 ರವರೆಗೆ ಆನ್‌ಲೈನ್‌ನಲ್ಲಿ ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ.

ನ್ಯಾನೋ ಕಾರಿಗೆ ಆನ್‌ಲೈನ್‌ನಲ್ಲಿ ಉತ್ತಮ ಪ್ರತಿಕ್ರಿಯೆ ದೊರತ ನಂತರ ವಾಹನೋದ್ಯಮ ತಜ್ಞ ಟುಟು ಧವನ್ ಮಾತನಾಡಿ, ಟಾಟಾ ಭವಿಷ್ಯದ ದಿನಗಳಲ್ಲಿ ವಹಿವಾಟು ಹೇಗೆ ನಡೆಸಬೇಕು ಎನ್ನುವುದಕ್ಕೆ ಮಾರ್ಗವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿಯೊಂದು ವಸ್ತುಗಳು ಆನ್‌ಲೈನ್‌ನಲ್ಲಿ ಲಭ್ಯವಿರುವಾಗ ಕಾರು ಯಾಕೆ ಬೇಡ? ಗ್ರಾಹಕರಿಗೆ ಸುಲಭವಾಗಿ, ಸುರಕ್ಷಿತವಾಗಿ ಬುಕ್ಕಿಂಗ್ ಮಾಡಲು ಅನುವಾಗುತ್ತದೆ ಎಂದು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ

ಧವನ್ ಹೇಳಿಕೆಯನ್ನು ಸಮರ್ಥಿಸಿದ ಜೈಪುರ್ ಮೂಲದ ಖ್ಯಾತ ಪತ್ರಕರ್ತ ಅವಿನಾಶ್ ಕಲ್ಲಾ ಮಾತನಾಡಿ, ಕಂಪ್ಯೂಟರ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡುವುದರಿಂದ ಸಮಯ ಉಳಿತಾಯವಾಗುವದಲ್ಲದೇ ಅರ್ಜಿಯನ್ನು ಪಡೆಯಲು ಅನಾವಶ್ಯಕವಾಗಿ ಸರದಿಗೆ ನಿಲ್ಲುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.

ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ 300 ರೂಪಾಯಿಗಳನ್ನು ಪಾವತಿಸಿ ಅರ್ಜಿ ಪಡೆಯುವ ಬದಲು ಆನ್‌ಲೈನ್ ಬುಕ್ಕಿಂಗ್‌ ಮಾಡಿದಲ್ಲಿ ಟಾಟಾ ಮೋಟಾರ್ಸ್‌ನಿಂದ ಪ್ರತಿ ಅರ್ಜಿಗೆ 200 ಡಿಸ್ಕೌಂಟ್ ದೊರೆಯುತ್ತದೆ.

ದ್ವಿಚಕ್ರ ವಾಹನವನ್ನು ಬದಿಗೆ ಸರಿಸಿ ನ್ಯಾನೋ ಖರೀದಿಸಲು ಸಿದ್ದರಾಗಿರುವ ಪತ್ರಕರ್ತರೊಬ್ಬರು ಮಾತನಾಡಿ, ಆನ್‌ಲೈನ್ ಬುಕ್ಕಿಂಗ್ ಸೌಲಭ್ಯದಿಂದಾಗಿ ಬಹಳಷ್ಟು ಸಮಯ ಉಳಿತಾಯವಾಗುತ್ತದೆ ಎನ್ನುತ್ತಾರೆ.

ನ್ಯಾನೋ ಗ್ರಾಹಕರಿಗಾಗಿ ಟಾಟಾ ಮೋಟಾರ್ಸ್ ದೇಶದ 15 ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಗ್ರಾಹಕರು ಬುಕ್ಕಿಂಗ್ ಶುಲ್ಕವಾದ 2,999 ರೂ.ಗಳನ್ನು ಪಾವತಿಸಿ ಉಳಿದ ಮೊತ್ತಕ್ಕೆ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೈರಸಿ ಡಿವಿಡಿಗಳನ್ನು ಖರೀದಿಸುವವರಿಗೆ ಜೈಲು ಶಿಕ್ಷೆ
ಬಡ್ಡಿ ದರ ಇಳಿಕೆಯಾಗಲಿದೆಯೇ?
ಅಮೆರಿಕದ 5 ಸಾವಿರ ಉದ್ಯೋಗಿಗಳ ಕಡಿತ: ಐಬಿಎಂ
ನ್ಯಾನೋ: ದ್ವಿಚಕ್ರ ವಾಹನ ಮಾರಾಟಕ್ಕೆ ಹೊಡೆತ ಇಲ್ಲ
ಮೂರರಿಂದ ಆರು ತಿಂಗಳಲ್ಲಿ ಭಾರತದ ಆರ್ಥಿಕ ಚೇತರಿಕೆ
ಟಾಟಾ ಸ್ಕೈಗೆ 'ಐಎಸ್‌ಒ' ಪ್ರಮಾಣ ಪತ್ರ