ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಖರೀದಿಗೆ ಸ್ಪೈಸ್‌ ನಂತರ ಐಬಿಎಂ ಹಿಂದೇಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಖರೀದಿಗೆ ಸ್ಪೈಸ್‌ ನಂತರ ಐಬಿಎಂ ಹಿಂದೇಟು
ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆ ಮತ್ತೊಂದು ಬಿಕ್ಕಟ್ಟಿಗೆ ಸಿಲುಕಿದೆ. ಇತ್ತೀಚೆಗೆ ಸ್ಪೈಸ್ ಗ್ರೂಪ್ ಬಿಡ್ ಪರಿಶೀಲನೆಯಲ್ಲಿ ಪಾರದರ್ಶಕತೆ ಕೊರತೆಯಿರುವುದರಿಂದ ಬಿಡ್‌ನಲ್ಲಿ ಭಾಗವಹಿಸುವುದು ಅನುಮಾನವೆಂದು ಹೇಳಿಕೆ ನೀಡಿದ ಬೆನ್ನಲ್ಲೆ ಐಬಿಎಂ ಕೂಡಾ ಸತ್ಯಂ ಖರೀದಿಯಿಂದ ದೂರವಿರುವುದಾಗಿ ಘೋಷಿಸಿದೆ.

ಸತ್ಯಂ ಕಂಪ್ಯೂಟರ್ ಸಂಸ್ಥೆಯ ಸಂಸ್ಥಾಪಕ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಾಮಲಿಂಗಾರಾಜು ಎಸಗಿದ 7800 ಕೋಟಿ ರೂ.ವಂಚನೆಯಿಂದಾಗಿ ತತ್ತರಿಸಿದ್ದು, ಕಂಪೆನಿಯು ಗ್ರಾಹಕರ ಮತ್ತು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಉತ್ತಮ ಗ್ರಾಹಕ ಕಂಪೆನಿಯ ಖರೀದಿಗಾಗಿ ಎದುರು ನೋಡುತ್ತಿದೆ.

ಸರಕಾರ ನೇಮಿಸಿದ ಸತ್ಯಂ ಅಡಳಿತ ಮಂಡಳಿ ಅಂತಿಮವಾಗಿ 8 ಬಿಡ್‌ದಾರರನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಐಬಿಎಂ ಕೂಡಾ ಸೇರ್ಪಡೆಯಾಗಿದೆ. ಆದರೆ ಐಬಿಎಂ ಬಿಡ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ ಎಂದು ದಿ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸತ್ಯಂ ಕಂಪ್ಯೂಟರ್ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ಆರ್ಥಿಕ ದಾಖಲಾತಿಗಳನ್ನು ತಿರುಚಿರುವುದರಿಂದ ಸತ್ಯಂನ ನಿಖರ ಸಂಪತ್ತಿನ ಮೌಲ್ಯದಲ್ಲಿ ಪಾರದರ್ಶಕತೆ ಇಲ್ಲದಿರುವುದು ಖರೀದಿದಾರ ಕಂಪೆನಿಗಳಿಗೆ ಚಿಂತೆ ಮೂಡಿಸಿದೆ. ನೂತನ ಖರೀದಿದಾರರು ಅಕ್ರೋಶಗೊಂಡ ಶೇರುದಾರರ ಅಧಿಕೃತ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸತ್ಯಂ ಕಂಪ್ಯೂಟರ್ ಬಿಡ್‌ನಲ್ಲಿ ಭಾಗವಹಿಸುವ ಕುರಿತಂತೆ ಇಲ್ಲಿಯವರೆಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲವೆಂದು ಸ್ಪೈಸ್ ಗ್ರೂಪ್ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯಂ, ಸ್ಪೈಸ್
ಮತ್ತಷ್ಟು
ಟಾಟಾರಿಂದ ಮತ್ತೊಂದು ಪ್ರಥಮ-ಆನ್‌ಲೈನ್ ಬುಕ್ಕಿಂಗ್‌
ಪೈರಸಿ ಡಿವಿಡಿಗಳನ್ನು ಖರೀದಿಸುವವರಿಗೆ ಜೈಲು ಶಿಕ್ಷೆ
ಬಡ್ಡಿ ದರ ಇಳಿಕೆಯಾಗಲಿದೆಯೇ?
ಅಮೆರಿಕದ 5 ಸಾವಿರ ಉದ್ಯೋಗಿಗಳ ಕಡಿತ: ಐಬಿಎಂ
ನ್ಯಾನೋ: ದ್ವಿಚಕ್ರ ವಾಹನ ಮಾರಾಟಕ್ಕೆ ಹೊಡೆತ ಇಲ್ಲ
ಮೂರರಿಂದ ಆರು ತಿಂಗಳಲ್ಲಿ ಭಾರತದ ಆರ್ಥಿಕ ಚೇತರಿಕೆ