ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗೂಗಲ್‌ನಿಂದ 200 ಹುದ್ದೆಗಳ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೂಗಲ್‌ನಿಂದ 200 ಹುದ್ದೆಗಳ ಕಡಿತ
ಅಂತರ್ಜಾಲ ಸರ್ಚ್ ಇಂಜಿನ್‌ನ ದೈತ್ಯ ಕಂಪೆನಿ ಗೂಗಲ್ ಇಂಕ್, ಆರ್ಥಿಕತೆಯ ಕುಸಿತದಿಂದಾಗಿ ವಿಶ್ವದಾದ್ಯಂತ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ 200 ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಹೇಳಿಕೆ ನೀಡಿದೆ.

ಗೂಗಲ್‌ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ 200 ಹುದ್ದೆಗಳನ್ನು ವಜಾಮಾಡುವ ಯೋಜನೆಯ ಕುರಿತು ಮಾಹಿತಿ ನೀಡಲಾಗಿದೆ ಎಂದು ಗ್ಲೋಬಲ್ ಸೇಲ್ಸ್ ಆಂಡ್ ಬಿಜಿನೆಸ್ ಡೆವಲೆಪ್‌ಮೆಂಟ್ ಉಪಾಧ್ಯಕ್ಷ ಒಮಿಡ್ ಕೊರ್‌ಡೆಸ್ಟನಿ‌ ಹೇಳಿದ್ದಾರೆ.

ವಹಿವಾಟನ್ನು ಪರಿಣಾಮಕಾರಿಯಾಗಿಸಿ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯನ್ನು ತರಲಾಗುತ್ತದೆ ಎಂದು ಅಂತರ್ಜಾಲ ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ತಿಳಿಸಿದೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಇತ್ತೀಚೆಗೆ 100 ಉದ್ಯೋಗಿಗಳನ್ನು ವಜಾಗೊಳಿಸಿದ್ದಲ್ಲದೇ ಇನ್ನಿತರ ಉದ್ಯೋಗಿಗಳ ಸೌಲಭ್ಯಗಳನ್ನು ರದ್ದುಗೊಳಿಸಿ ವೇತನಕ್ಕೆ ಕತ್ತರಿ ಹಾಕಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಖರೀದಿಗೆ ಸ್ಪೈಸ್‌ ನಂತರ ಐಬಿಎಂ ಹಿಂದೇಟು
ಟಾಟಾರಿಂದ ಮತ್ತೊಂದು ಪ್ರಥಮ-ಆನ್‌ಲೈನ್ ಬುಕ್ಕಿಂಗ್‌
ಪೈರಸಿ ಡಿವಿಡಿಗಳನ್ನು ಖರೀದಿಸುವವರಿಗೆ ಜೈಲು ಶಿಕ್ಷೆ
ಬಡ್ಡಿ ದರ ಇಳಿಕೆಯಾಗಲಿದೆಯೇ?
ಅಮೆರಿಕದ 5 ಸಾವಿರ ಉದ್ಯೋಗಿಗಳ ಕಡಿತ: ಐಬಿಎಂ
ನ್ಯಾನೋ: ದ್ವಿಚಕ್ರ ವಾಹನ ಮಾರಾಟಕ್ಕೆ ಹೊಡೆತ ಇಲ್ಲ