ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾರ್ಪೋರೇಟ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮಾತುಕತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರ್ಪೋರೇಟ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮಾತುಕತೆ
PTI
ಮುಂಬರುವ ವಾರದಲ್ಲಿ ಲಂಡನ್‌ನಲ್ಲಿ ಜಿ-20ರಾಷ್ಟ್ರಗಳ ಶೃಂಗಸಭೆ ನಡೆಯಲಿದ್ದು, ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ಔದ್ಯೋಗಿಕ ಕ್ಷೇತ್ರದ ಮೇಲಾದ ಪರಿಣಾಮಗಳ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್ ಕಾರ್ಪೋರೇಟ್ ಮುಖ್ಯಸ್ಥರೊಂದಿಗೆ ನಾಳೆ ಚರ್ಚೆ ನಡೆಸಲಿದ್ದಾರೆ.

ಸಂವಾದದಲ್ಲಿ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ,ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ,ಭಾರತ್ ಫೋರ್ಜ್ ಮುಖ್ಯಸ್ಥ ಬಾಬಾ ಕಲ್ಯಾಣಿ ಮತ್ತು ಎಫ್‌ಐಸಿಸಿಐ, ಸಿಐಐ ಮತ್ತು ಅಸೋಚಾಮ್ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಪ್ರದಾನಿ ಕಚೇರಿಯ ಮೂಲಗಳು ತಿಳಿಸಿವೆ.

ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ರಾಷ್ಟ್ರಗಳ ಜಗತ್ತಿನ ಪ್ರಭಾವಿ ಶೃಂಗಸಭೆ ಏಪ್ರಿಲ್ 2 ರಂದು ಲಂಡನ್‌ನಲ್ಲಿ ನಡೆಯಲಿದ್ದು, ದೇಶದ ಪ್ರಮುಖ ಕಾರ್ಪೋರೇಟ್ ಕಂಪೆನಿಗಳ ಮುಖ್ಯಸ್ಥರು ಪ್ರಧಾನಿಗೆ ಮಹತ್ವದ ಮಾಹಿತಿಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲದ ಬಡ್ಡಿ ದರ ಹೆಚ್ಚಳ ಹಾಗೂ ನಗದು ಚಲಾವಣೆಯ ಕೊರತೆ ದೇಶದ ಔದ್ಯೋಗಿಕ ಕ್ಷೇತ್ರಕ್ಕೆ ಬಿಕ್ಕಟ್ಟಿನ ಸಮಸ್ಯೆ ಸೃಷ್ಟಿಸಿದೆ. ಹಣದುಬ್ಬರ ಶೂನ್ಯಕ್ಕೆ ಇಳಿಕೆಯಾದರೂ ಬಡ್ಡಿ ದರದಲ್ಲಿ ಹೆಚ್ಚಳವಾಗಿದೆ ಎಂದು ಎಂದು ಕಾರ್ಪೋರೇಟ್ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಎಸ್‌ಎಲ್‌ವಿ-3 ರಾಕೆಟ್
ಬಿಎಸ್‌ಎನ್‌‌ಎಲ್ ಯೋಜನೆ
ಆರ್ಥಿಕ ಪುನಶ್ಚೇತನಕ್ಕಾಗಿ ಸರಕಾರ, ಆರ್‌ಬಿಐ ಕ್ರಮ: ಚಾವ್ಲಾ
ಗೂಗಲ್‌ನಿಂದ 200 ಹುದ್ದೆಗಳ ಕಡಿತ
ಸತ್ಯಂ ಖರೀದಿಗೆ ಸ್ಪೈಸ್‌ ನಂತರ ಐಬಿಎಂ ಹಿಂದೇಟು
ಟಾಟಾರಿಂದ ಮತ್ತೊಂದು ಪ್ರಥಮ-ಆನ್‌ಲೈನ್ ಬುಕ್ಕಿಂಗ್‌