ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಫ್ತು ವಹಿವಾಟಿನಲ್ಲಿ ಶೇ.3-4ರಷ್ಟು ಹೆಚ್ಚಳ:ಪಿಳ್ಳೈ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಫ್ತು ವಹಿವಾಟಿನಲ್ಲಿ ಶೇ.3-4ರಷ್ಟು ಹೆಚ್ಚಳ:ಪಿಳ್ಳೈ
ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ರಫ್ತು ವಹಿವಾಟು ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ಶೇ.24 ರಷ್ಟು ಏರಿಕೆ ಕಂಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.3-4 ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವಾಣಿಜ್ಯ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿದ್ದಾರೆ.

ವಾರ್ಷಿಕ ರಪ್ತು ವಹಿವಾಟು ಋಣಾತ್ಮಕದತ್ತ ಸಾಗದಿರುವುದು ಉತ್ತಮ ಸಂಗತಿಯಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಶೇ.30 ರಷ್ಟು ರಫ್ತು ವಹಿವಾಟು ನಡೆಸಿರುವುದು ಮಹತ್ವದ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಾರ್ಷಿಕ ರಫ್ತು ವಹಿವಾಟು 170 ಬಿಲಿಯನ್ ಡಾಲರ್‌ಗಳಿಗೆ ತಲುಪಿದಲ್ಲಿ ರಫ್ತು ವಹಿವಾಟು ಶೇ.3-4 ರಷ್ಟು ಹೆಚ್ಚಳವಾಗುವುದರಿಂದ ನಾವು ತುಂಬಾ ಅದೃಷ್ಟವಂತರಾಗುತ್ತೇವೆ ಎಂದು ಪಿಳ್ಳೈ ಸಿಐಐ ವಾರ್ಷಿಕ ಸಭೆಯಲ್ಲಿ ನುಡಿದರು.

2008-09ರ ಆರ್ಥಿಕ ಸಾಲಿನ ಮೊದಲ ಆರು ತಿಂಗಳಲ್ಲಿ ರಫ್ತು ವಹಿವಾಟಿನಲ್ಲಿ ಶೇ.30 ರಷ್ಟು ಏರಿಕೆ ಕಂಡಿತ್ತು. ಆದರೆ ಜಾಗತಿಕ ಆರ್ಥಿಕ ಕುಸಿತದ ಪ್ರಭಾವದಿಂದಾಗಿ ಬೇಡಿಕೆಗಳನ್ನು ರದ್ದುಗೊಳಿಸಿದ್ದರಿಂದ ಅಕ್ಟೋಬರ್ ತಿಂಗಳ ನಂತರ ರಫ್ತು ವಹಿವಾಟು ಕುಸಿತ ಕಂಡಿತು ಎಂದು ಜಿ.ಕೆ ಪಿಳ್ಳೈ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಫ್ತು, ವಹಿವಾಟು, ಪಿಳ್ಳೈ
ಮತ್ತಷ್ಟು
ಕಾರ್ಪೋರೇಟ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮಾತುಕತೆ
ಜಿಎಸ್‌ಎಲ್‌ವಿ-3 ರಾಕೆಟ್
ಬಿಎಸ್‌ಎನ್‌‌ಎಲ್ ಯೋಜನೆ
ಆರ್ಥಿಕ ಪುನಶ್ಚೇತನಕ್ಕಾಗಿ ಸರಕಾರ, ಆರ್‌ಬಿಐ ಕ್ರಮ: ಚಾವ್ಲಾ
ಗೂಗಲ್‌ನಿಂದ 200 ಹುದ್ದೆಗಳ ಕಡಿತ
ಸತ್ಯಂ ಖರೀದಿಗೆ ಸ್ಪೈಸ್‌ ನಂತರ ಐಬಿಎಂ ಹಿಂದೇಟು