ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ಘೋಷಣೆ
ಸರಕಾರಿ ಸ್ವಾಮ್ಯದ ಅಲಹಾಬಾದ್ ಬ್ಯಾಂಕ್, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್‌ಗಳು 25 ರಿಂದ 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿವೆ.

ಬಡ್ಡಿ ದರ ಕಡಿತದಿಂದಾಗಿ ಗೃಹಸಾಲ, ಅಟೋ ಮತ್ತು ಇತರ ಸಾಲಗಳು ಅಗ್ಗವಾಗಲಿದ್ದು,ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಅಲಹಾಬಾದ್ ಬ್ಯಾಂಕ್ ಪ್ರೈಮ್ ಲೆಂಡಿಂಗ್ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ್ದು, ಬಡ್ಡಿದರವನ್ನು ಶೇ.12.50 ರಿಂದ ಶೇ.12.25ಕ್ಕೆ ಇಳಿಸಲಾಗಿದೆ ಎಂದು ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಅವಧಿ ಠೇವಣಿಗಳ ಮೇಲೆ ಕೂಡಾ ಬಡ್ಡಿ ದರ ಪರಿಷ್ಕರಿಸಲಾಗುತ್ತಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಅದರಂತೆ, ಕೋಲ್ಕತಾ ಮೂಲದ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ್ದು, ಶೇ.12.25ಕ್ಕೆ ಇಳಿಕೆ ಮಾಡಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಮತ್ತು ಕಾರ್ಪೋರೇಟ್ ಸಾಲಗಳು ಅಗ್ಗವಾಗಲಿವೆ ಎಂದು ಬ್ಯಾಂಕ್‌ಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿವೆ.

ಕೆಲ ದಿನಗಳ ಹಿಂದೆ ಸರಕಾರಿ ಸ್ವಾಮ್ಯದ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಕೂಡಾ 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ್ದು, ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ಯಾಂಕ್, ಬಡ್ಡಿ ದರ, ಘೋಷಣೆ
ಮತ್ತಷ್ಟು
ರಫ್ತು ವಹಿವಾಟಿನಲ್ಲಿ ಶೇ.3-4ರಷ್ಟು ಹೆಚ್ಚಳ:ಪಿಳ್ಳೈ
ಕಾರ್ಪೋರೇಟ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮಾತುಕತೆ
ಜಿಎಸ್‌ಎಲ್‌ವಿ-3 ರಾಕೆಟ್
ಬಿಎಸ್‌ಎನ್‌‌ಎಲ್ ಯೋಜನೆ
ಆರ್ಥಿಕ ಪುನಶ್ಚೇತನಕ್ಕಾಗಿ ಸರಕಾರ, ಆರ್‌ಬಿಐ ಕ್ರಮ: ಚಾವ್ಲಾ
ಗೂಗಲ್‌ನಿಂದ 200 ಹುದ್ದೆಗಳ ಕಡಿತ