ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಭಾರತದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ಪ್ಯಾಕೇಜ್‌ಗಳ ಅಗತ್ಯವಾಗಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.ಮುಂಬರುವ 2009-10ರ ಆರ್ಥಿಕ ಸಾಲಿನಲ್ಲಿ ಮತ್ತಷ್ಟು ಉತ್ತೇಜನ ಪ್ಯಾಕೇಜ್‌ಗಳ ಅಗತ್ಯವಿದ್ದು, ಆದರೆ ಕೆಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕಾಗಿದೆ ಎಂದು ಅಭಿಪ್ರಾಯಟ್ಟರು.ಮುಂಬರುವ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಏರಿಕೆ ಸಾಧ್ಯತೆ ಕುರಿತಂತೆ ಯೋಜನಾ ಆಯೋಗ ಪ್ರಧಾನಮಂತ್ರಿಯವರಿಗೆ ವಿವರಣೆ ಕಳುಹಿಸಿಕೊಡಲಾಗಿದೆ ಎಂದು ಮೊಂಟೆಕ್ ಹೇಳಿದ್ದಾರೆ. ದೇಶದ ಅಭಿವೃದ್ಧಿಯ ಕೆಲ ಅಂಕಿ ಅಂಶಗಳಿಂದ ಜಿಡಿಪಿ ದರ ಶೇ.9 ರಷ್ಟಾಗಲಿದೆ ಎಂದು ಉಹಿಸಲಾಗಿತ್ತು. ಆದರೆ ಆರ್ಥಿಕ ಕುಸಿತದಿಂದ ಕೆಲ ಪರಿಣಾಮಗಳು ಬೀರಿದ್ದರಿಂದ ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಲಾಯಿತು ಎಂದು ಮೊಂಟೆಕ್ ತಿಳಿಸಿದ್ದಾರೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಹಾಗೂ ಮುಂಬರುವ ಆರ್ಥಿಕ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಅಂದಾಜು ಶೇ.7ರಷ್ಟಾಗಲಿದೆ ಎಂದು ಕೆಲ ದಿನಗಳ ಹಿಂದೆ ಮೊಂಟೆಕ್ ಹೇಳಿಕೆ ನೀಡಿದ್ದರು. |