ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಡ್ಡಿ ದರ ಕಡಿತಗೊಳಿಸಲು ಆರ್‌ಬಿಐಗೆ ಪ್ರಧಾನಿ ಸಲಹೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಡ್ಡಿ ದರ ಕಡಿತಗೊಳಿಸಲು ಆರ್‌ಬಿಐಗೆ ಪ್ರಧಾನಿ ಸಲಹೆ
PTI
ಆರ್ಥಿಕ ಅಭಿವೃದ್ಧಿಯ ಪುನಶ್ಚೇತನಕ್ಕಾಗಿ ಅಡ್ಡಿಯಾಗಿರುವ ಹೆಚ್ಚಿನ ಬಡ್ಡಿ ದರವನ್ನು ಕಡಿತಗೊಳಿಸುವಂತೆ ರಿಸರ್ವ್ ಬ್ಯಾಂಕ್‌ಗೆ ಸಲಹೆ ನೀಡಲಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಉದ್ಯಮಿಗಳಿಗೆ ಮಾಹಿತಿ ನೀಡಿದ್ದಾರೆ.

ಅಧಿಕವಾಗಿರುವ ಬಡ್ಡಿ ದರ ಕಡಿತಗೊಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌‌ಗೆ ಪ್ರಧಾನಿಯವರು ಮನವಿ ಮಾಡಿದ್ದಾರೆ ಎಂದು ಎಫ್‌ಐಸಿಸಿಐ ಅಧ್ಯಕ್ಷ ಹರ್ಷಪತಿ ಸಿಂಘಾನಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಣದುಬ್ಬರ ಶೂನ್ಯ ಮಟ್ಟಕ್ಕೆ ಇಳಿಕೆಯಾದರೂ ಬ್ಯಾಂಕ್‌ಗಳ ಪ್ರೈಮ್ ಲೆಂಡಿಂಗ್ ದರ ಶೇ.10ಕ್ಕಿಂತ ಏರಿಕೆಯಾದ ಹಿನ್ನೆಲೆಯಲ್ಲಿ ಉದ್ಯಮಿಗಳು ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ನಡೆದ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದರು.

ಬಡ್ಡಿ ದರ ಕಡಿತದ ಬಗ್ಗೆ ಉದ್ಯಮಿಗಳು ವ್ಯಕ್ತಪಡಿಸಿದ ನಿಲುವುಗಳನ್ನು ಪ್ರಧಾನಿ ಶ್ಲಾಘಿಸಿದರು. ಸಭೆಯಲ್ಲಿ ಆರ್‌ಬಿಐ ಗವರ್ನರ್ ಡಿ.ಸುಬ್ಬಾರಾವ್ ಅವರು ಉಪಸ್ಥಿತರಿದ್ದರು.

ಕಳೆದ ನಾಲ್ಕು ವರ್ಷಗಳಿಂದ ನಿರಂತರ ಶೇ. 8.5 - 9 ರಷ್ಟು ಏರಿಕೆ ಕಂಡಿದ್ದ ಜಿಡಿಪಿ ದರ ನಂತರದ ಅವಧಿಯಲ್ಲಿ ಕುಸಿತ ಕಂಡಿತು. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.7 ರ ಗಡಿಯನ್ನು ತಲುಪುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕಾಗಿ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಏಪ್ರಿಲ್ 2 ರಂದು ಲಂಡನ್‌ನಲ್ಲಿ ನಡೆಯವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ದೇಶದ ಪ್ರಮುಖ ಕಾರ್ಪೋರೇಟ್ ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತಷ್ಟು ಉತ್ತೇಜನ ಪ್ಯಾಕೇಜ್‌‌ ಅಗತ್ಯ:ಮೊಂಟೆಕ್
ಹಣದುಬ್ಬರ ಮತ್ತಷ್ಟು ಕುಸಿಯುವ ಸಾಧ್ಯತೆಗಳಿಲ್ಲ:ವೀರಮಣಿ
ಸಿಐಐ ಅಧ್ಯಕ್ಷರಾಗಿ ವೇಣು ಶ್ರೀನಿವಾಸನ್
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ಘೋಷಣೆ
ರಫ್ತು ವಹಿವಾಟಿನಲ್ಲಿ ಶೇ.3-4ರಷ್ಟು ಹೆಚ್ಚಳ:ಪಿಳ್ಳೈ
ಕಾರ್ಪೋರೇಟ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮಾತುಕತೆ