ವಾಷಿಂಗ್ಟನ್: ಉದ್ಯಮಿ, ಭಾರತಿ ಎಂಟರ್‌ಪ್ರೈಸಸ್ ಮುಖ್ಯಸ್ಥ ಸುನಿಲ್ ಭಾರತಿ ಮಿತ್ತಲ್ ಅವರನ್ನು ಅಂತಾರಾಷ್ಟ್ರೀಯ ಶಾಂತಿ ಪಾಲನಾ ಕಾರ್ನೆಗಿ ದತ್ತಿ ನಿಧಿಯ ಧರ್ಮದರ್ಶಿ ಮಂಡಳಿಯನ್ನು ಸೇರಿದ್ದಾರೆ. ಬಹುರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಿತ್ತಲ್ ಸಮರ್ಥರೆಂದು ಕಂಡು ಬಂದ ಹಿನ್ನಲೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಕಾರ್ನೆಗಿ ಅಧ್ಯಕ್ಷ ಜೆಸ್ಸಿಕಾ ಮ್ಯಾಥ್ಯೂ ತಿಳಿಸಿದ್ದಾರೆ. |