ಟಾಟಾ ಮೋಟಾರ್ಸ್‌ನ ನ್ಯಾನೋ ಘಟಕ ಸ್ಥಳಾಂತರವಾಗಿರಬಹುದು; ಆದರೆ ಸಿಂಗೂರಿನ ಜನತೆ ನ್ಯಾನೋ ಘಟಕ ಪ್ರಾರಂಭಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಹೇಳಿದ್ದಾರೆ.
ಸಿಂಗೂರಿನ ಜನತೆಗೆ ತಮ್ಮ ತಪ್ಪಿನ ಅರಿವಾಗಿದ್ದು, ರಾಜಕೀಯ ಬಲಿಪಶುವಾಗಿದ್ದಾರೆ. ಟಾಟಾ ಕಾರು ತಯಾರಿಕೆ ಘಟಕ ಪುನರಾರಂಭಿಸುವಂತೆ ಟಾಟಾ ಅಧಿಕಾರಿಗಳಿಗೆ ಮನಿವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಬುದ್ಧದೇವ್ ವಿಸ್ವಾಸವ್ಯಕ್ತಪಡಿಸಿದ್ದಾರೆ.
|