ಬ್ಯಾಂಕ್ ಗ್ರಾಹಕರಿಗೆ ಸಂತಸದ ಸುದ್ದಿ. ನಿಮ್ಮ ಖಾತೆಯಿರುವ ಬ್ಯಾಂಕ್‌ನ ಎಟಿಎಂ ಅರಸುತ್ತಾ ಅಲೆಯುವ ಸಾಧ್ಯತೆಗಳಿಗೆ ವಿರಾಮ ಹಾಕಿ.
ಏ.1 ರಿಂದ ಹಣ ಡ್ರಾ ಮಾಡಲು ಯಾವುದೇ ಬ್ಯಾಂಕಿನಿಂದ ಉಚಿತವಾಗಿ ಹಣವ್ನನು ಡ್ರಾ ಮಾಡಬಹುದು. ಯಾವುದೇ ಶುಲ್ಕವಿರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಪ್ರಸ್ತುತ ಬೇರೆ ಬ್ಯಾಂಕಿನ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ 20 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತಿದೆ.
ಏ.1 ರಿಂದ ಅನ್ವಯವಾಗುವಂತೆ ಯಾವುದೇ ಬ್ಯಾಂಕ್‌ಗಳು ಅನ್ಯ ಬ್ಯಾಂಕ್ ಗ್ರಾಹಕರಿಗೆ ಹಣ ಡ್ರಾ ಹಾಗೂ ಬ್ಯಾಲೆನ್ಸ್ ಪರಿಶೀಲನೆಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಆರ್‌ಬಿಐ ಅಧಿಸೂಚನೆ ಹೊರಡಿಸಿದೆ.
ಆದರೆ ಕ್ರೆಡಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿದಲ್ಲಿ ಶೇ.2.5 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
|